ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಅಕ್ಷತ ಪೂಜೆ ಆರಂಭ: ಪ್ರತಿಯೊಬ್ಬ ಭಕ್ತರಿಗೆ ತಲುಪಲಿದೆ ಪ್ರಸಾದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
 
ಅಯೋಧ್ಯೆಯಲ್ಲಿ ಶ್ರೀರಾಮ ಭವ್ಯ ಮಂದಿರದಲ್ಲಿ ವಿರಾಜಮಾನವಾಗುವ ಕಾಲ ಸನ್ನಿಹತವಾಗಿದೆ. ಜನವರಿ 22 ರಂದು ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ.

ಹೀಗಾಗಿ ಇಂದಿನಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಇಂದು ರಾಮ ಮಂದಿರದಲ್ಲಿ ಅಕ್ಷತ ಪೂಜೆ ನಡೆಯಲಿದೆ. ಪೂಜೆಯ ಬಳಿಕ ಅಕ್ಷತೆ ಪ್ರಸಾದವನ್ನು ದೇಶದ ರಾಮ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.

ರಾಮ ದರ್ಬಾರ್ ನಲ್ಲಿ 100 ಕ್ವಿಂಟಾಲ್ ನಷ್ಟು ಅಕ್ಷತೆಗೆ ಪೂಜೆ ಸಲ್ಲಿಸಲಾಗಿದ್ದು, ಅಕ್ಕಿಗೆ ಅರಿಶಿನ ಹಾಗೂ ದೇಸಿ ತುಪ್ಪ ಮಿಶ್ರಣ ಮಾಡುವ ಮೂಲಕ ಅಕ್ಷತೆಯನ್ನು ತಯಾರಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.

ದೇಶದ 45 ಸಂಘಟನಾ ಪ್ರಾಂತ್ಯಗಳಿಂದ ಅಯೋಧ್ಯೆಗೆ ಆಗಮಿಸಿರುವ 90 ಪ್ರಮುಖ ಪದಾಧಿಕಾರಿಗಳಿಗೆ ಈ ಅಕ್ಷೆತೆಯನ್ನು ವಿತರಣೆ ಮಾಡಲಾಗುತ್ತದೆ. ಬಳಿಕ ವಿಹೆಚ್ ಪಿಯ ಸದಸ್ಯರು ಈ ಅಕ್ಷತೆಯನ್ನು ಜ.22ಕ್ಕೂ ಮುನ್ನ ದೇಶಾದ್ಯಂತ ವಿತರಣೆ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!