ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ವೆಸ್ಟ್ ಇಂಡೀಸ್ ಕ್ರಿಕೆಟರ್ ಸುನೀಲ್ ನರೈನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ಸುನೀಲ್ ನರೈನ್ ನಿವೃತ್ತಿ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನರೈನ್, ನಾನು ವೆಸ್ಟ್ ಇಂಡೀಸ್‌ಗಾಗಿ ಕೊನೆಯ ಬಾರಿಗೆ ಆಡಿ 4 ವರ್ಷಗಳು ಕಳೆದಿವೆ .ಆದರೆ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನನ್ನ ನಿವೃತ್ತಿ ಘೋಷಿಸುತ್ತಿದ್ದೇನೆ.ಮತ್ತು ದೇಶಿಯ 50 ಓವರ್‌ಗಳ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ಹೇಳಿದರು.
ಆದ್ರೆ ಪ್ರಪಂಚದಾದ್ಯಂತ ಫ್ರಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವುದಾಗಿ ಘೋಷಿಸಿದರು.

65 ODIಗಳಲ್ಲಿ 92 ವಿಕೆಟ್‌ಗಳು, 51 T20I ಪಂದ್ಯಗಳಲ್ಲಿ 52 ಮತ್ತು ಆರು ಟೆಸ್ಟ್‌ಗಳಲ್ಲಿ 21 ವಿಕೆಟ್‌ಗಳೊಂದಿಗೆ ನರೈನ್ ನಿವೃತ್ತರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!