ಸಾಲು ಸಾಲು ಸೋಲು ಅನುಭವಿಸುತ್ತಿರುವ ಅಕ್ಷಯ್ ಈಗಲೂ ನಂ.1

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಅಕ್ಷಯ್ ಕುಮಾರ್ ಸಿನಿಮಾಗಳು ನಿರೀಕ್ಷೆ ಮಟ್ಟದಲ್ಲಿ ಹಿಟ್ ಆಗುತ್ತಿಲ್ಲ. ಆದರೂ ಅವರು ನಂ.1 ಸ್ಥಾನವನ್ನು ಕಾಯ್ಡುಕೊಂಡಿದ್ದಾರೆ.

ಸಿನಿಮಾ ಸೋತರೂ ಅಕ್ಷಯ್ ನಂ.1 ಹೇಗೆ ಅಂತೀರಾ? ಅಕ್ಷಯ್ ನಂ.1 ಆಗಿರುವುದು ಜಾಹೀರಾತು ಲೋಕದಲ್ಲಿ. ಜಾಹೀರಾತು ಕ್ಷೇತ್ರದಲ್ಲಿ ಅಕ್ಷಯ್‌ಗೆ ಭರ್ಜರಿ ಬೇಡಿಕೆ ಇದೆ. ಅನೇಕ ಕಂಪನಿಗಲ ಬ್ರಾಂಡ್ ಅಂಬಾಸಿಡರ್ ಅಕ್ಷಯ್ ಆಗಿದ್ದಾರೆ. ಟಿವಿ ಜಾಹೀರಾತುಗಳಲ್ಲಿ ಅತಿ ಹೆಚ್ಚು ಕಾಣಿಸಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ನಂಬರ್ ಒನ್ ಆಗಿದ್ದಾರೆ.

ಸಿನಿಮಾಗಳು ಸೋತರೂ ಜಾಹೀರಾತುಗಳಲ್ಲಿ ಅಕ್ಷಯ್‌ಗೆ ಭರ್ಜರಿ ಸಂಪಾದನೆ ಆಗುತ್ತಿದೆ. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ನಂತರದ ಸ್ಥಾನದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಮೂರನೇ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!