ನರ ದೌರ್ಬಲ್ಯದಿಂದ ಬಳಲುತ್ತಿದ್ದೀರಾ? ಸಮಸ್ಯೆಯಿಂದ ಹೊರಬರಲು ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನರಗಳ ದೌರ್ಬಲ್ಯವು ಮಕ್ಕಳು ಮತ್ತು ವಯಸ್ಕರೆನ್ನದೆ ಎಲ್ಲರಲ್ಲೂ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಇದರೊಂದಿಗೆ ಹೋರಾಡುವ ಅನೇಕ ಜನರಿದ್ದಾರೆ. ನರ ದೌರ್ಬಲ್ಯ ಹೊಂದಿರುವವರು ಸ್ವಲ್ಪ ಭಾರ ಎತ್ತಿದ ಕೂಡಲೇ ಕೈಗಳು ನೋವುಂಟು ಮಾಡಬಹುದು. ಕಷ್ಟಕರವಾದ ಕೆಲಸಗಳನ್ನು ಮಾಡದಂತೆ ತಡೆಯುತ್ತದೆ. ಕೈ-ಕಾಲು ನಡುಗುವುದು, ನಡೆದಾಡುವಾಗ ವಿಪರೀತ ಸುಸ್ತು, ಜುಮ್ಮೆನ್ನುವುದು ಹೀಗೆ ನಾನಾ ಲಕ್ಷಣಗಳಿರುತ್ತವೆ.

ನರಗಳ ದೌರ್ಬಲ್ಯವು ಮುಖ್ಯವಾಗಿ ಆಹಾರದಲ್ಲಿ ಬಿ ವಿಟಮಿನ್ ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್ ಕೊರತೆಯಿಂದ ಉಂಟಾಗುತ್ತದೆ. ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ಧಾನ್ಯಗಳ ಮೇಲಿನ ಪದರಗಳಲ್ಲಿ ಕಂಡುಬರುತ್ತವೆ. ಪಾಲಿಶ್ ಮಾಡಿದ ಆಹಾರವನ್ನು ಸೇವಿಸುವುದರಿಂದ ಬಿ ಕಾಂಪ್ಲೆಕ್ಸ್ ಕೊರತೆ ಉಂಟಾಗುತ್ತದೆ. ಇದು ನರ ದೌರ್ಬಲ್ಯದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ನರ ದೌರ್ಬಲ್ಯದ ಸಮಸ್ಯೆಯನ್ನು ನಿವಾರಿಸುವ ಕ್ರಮ;

ತರಕಾರಿ, ಸೊಪ್ಪು ಮಾತ್ರವಲ್ಲದೆ ಧಾನ್ಯಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖವಾಗಿ ಸೇರಿಸಬೇಕು. ಆದರೆ ಅವುಗಳನ್ನು ಪಾಲಿಶ್ ಮಾಡಿ ತಿನ್ನುವುದರಿಂದ ನಮಗೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ.

ಪಾಲಿಶ್ ಮಾಡದ ಅಕ್ಕಿ, ರಾಗಿ ಜೋಳವನ್ನು ಮುಖ್ಯ ಆಹಾರವಾಗಿ ತೆಗೆದುಕೊಳ್ಳಬೇಕು. ಇವುಗಳ ಮೇಲೆ ಹೆಚ್ಚಿನ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಇರುವುದರಿಂದ ಅವು ದೇಹಕ್ಕೆ ವಿಶೇಷವಾಗಿ ನರಗಳಿಗೆ ಉಪಯುಕ್ತವಾಗಿವೆ. ಹಸಿ ಧಾನ್ಯಗಳನ್ನು ರುಬ್ಬಿ ನೇರವಾಗಿ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಗುತ್ತದೆ.

ಅಕ್ಕಿ, ಗೋಧಿ, ಬೇಳೆ, ಸಜ್ಜೆ, ರಾಗಿ, ಇತ್ಯಾದಿಗಳನ್ನು ಆದಷ್ಟು ಹೊಟ್ಟು ತೆಗೆಯದೆ ಆಹಾರದಲ್ಲಿ ಸೇರಿಸಬೇಕು. ಹೀಗೆ ಮಾಡುವುದರಿಂದ ನರ ದೌರ್ಬಲ್ಯದ ಸಮಸ್ಯೆಗೆ ಯಾವುದೇ ಔಷಧಿಯನ್ನು ಬಳಸುವ ಅಗತ್ಯವಿಲ್ಲ. ಬೆಳೆಯುವ ವಯಸ್ಸಿನ ಮಕ್ಕಳಿಗೆ ಇವುಗಳನ್ನು ನೀಡುವುದರಿಂದ ದೈಹಿಕ ದೃಢತೆಯನ್ನು ಹೆಚ್ಚಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!