ತನ್ನ ಸಹೋದರಿಯನ್ನು‌ ನೆನೆದು ಶೋನಲ್ಲಿ ಕಣ್ಣೀರಿಟ್ಟ ಅಕ್ಷಯ್‌ ಕುಮಾರ್:‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಶೋವೊಂದರಲ್ಲಿ ತನ್ನ ಸಹೋದರಿಯನು ನೆನೆದು ಭಾವುಕರಾದ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ಶೀಘ್ರದಲ್ಲೇ ʻರಕ್ಷಾಬಂಧನʼ ಚಿತ್ರದ ಮೂಲಕ ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಅಣ್ಣ-ತಂಗಿಯರ ಸೆಂಟಿಮೆಂಟ್‌ನಿಂದ ಕೂಡಿದ್ದು, ಆಗಸ್ಟ್ 11 ರಾಖಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ. ಅಕ್ಷಯ್ ಈ ಸಿನಿಮಾ ಈ ಚಿತ್ರದ ಪ್ರಚಾರದ ಭಾಗವಾಗಿ, ಬಾಲಿವುಡ್ ಶೋ ಸೂಪರ್‌ಸ್ಟಾರ್ ಸಿಂಗರ್‌ನ ಎರಡನೇ ಸೀಸನ್‌ಗೆ ಅತಿಥಿಯಾಗಿ ಭಾಗವಹಿಸಿದ್ದರು.

ʻರಾಖಿʼ ಹಬ್ಬದ ವಿಶೇಷ ಸಂಚಿಕೆಗೆ ಅತಿಥಿಯಾಗಿ ಬಂದಿದ್ದ ಅಕ್ಷಯ್ ಈ ಸಂಚಿಕೆಯಲ್ಲಿ ಅಣ್ಣ-ತಂಗಿ ಸಂಬಂಧವನ್ನು ನೆನಪಿಸುವ ಹಾಡುಗಳನ್ನು ಸ್ಪರ್ಧಾರ್ಥಿಗಳು ಹಾಡಿದರು. ಈ ಸಮಯದಲ್ಲಿ ಅಕ್ಷಯ್ ತನ್ನ ಸಹೋದರಿಯೊಂದಿಗೆ ರಾಖಿ ಹಬ್ಬ ಆಚರಿಸುತ್ತಿರುವ ಫೋಟೋಗಳು ಪರದೆಯ ಮೇಲೆ ಹಾಕಲಾಗಿತ್ತು. ಅವುಗಳನ್ನು ನೋಡಿದ ತಕ್ಷಣ ಅಕ್ಷಯ್ ತುಂಬಾ ಭಾವುಕರಾಗಿ ನನ್ನ ತಂಗಿ ದೇವಿ ಬಂದ ನಂತರ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಮ್ಮ ಬಾಂಧವ್ಯ ಅತ್ಯಂತ ಅಮೂಲ್ಯವಾದುದು ಎಂದು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!