ಬುಲ್ಸ್‌ ಕೈತಪ್ಪಿದ ಪವನ್‌ ಸೆಹ್ರಾವತ್:‌ ಪ್ರೋ ಕಬಡ್ಡಿ ಇತಿಹಾಸದಲ್ಲೇ ಅತಿಹೆಚ್ಚಿನ ಮೊತ್ತಕ್ಕೆ ಬಿಕರಿ

ಹೊಸದಿಗಂತಯ ಡಿಜಿಟಲ್‌ ಡೆಸ್ಕ್
ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 9 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವಾದ ಇತಿಹಾಸ ಸೃಷ್ಟಿಯಾಗಿದ್ದು, ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಲೀಗ್ ಇತಿಹಾಸದಲ್ಲಿ 2 ಕೋಟಿ ರೂ.ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬುಲ್ಸ್‌ ತಂಡದ ಒನ್‌ ಮ್ಯಾನ್‌ ಆರ್ಮಿ ಪವನ್‌ ಸೆಹ್ರಾವತ್‌ ಈ ಆವೃತ್ತಿಯಿಂದ ತಮಿಳ್‌ ತಲೈವಸ್‌ ಪರ ಕಣಕ್ಕಿಳಿಯಲಿದ್ದು, ಬೆಂಗಳೂರು ತಂಡದ ಅಭಿಮಾನಿಗಳಿಗೆ ಭಾರೀ ನಿರಾಸೆ ಎದುರಾಗಿದೆ.
ಈ ವರ್ಷದ ಆಟಗಾರರ ಹರಾಜು ಪ್ಪರಕಿಯೆಯಲ್ಲಿ ಪವನ್ ಸೆಹ್ರಾವತ್, ವಿಕಾಶ್ ಕಂಡೋಲಾ, ಫಜೆಲ್ ಅತ್ರಾಚಲಿ ಮತ್ತು ಗುಮಾನ್ ಸಿಂಗ್ ಮೊದಲ ದಿನವೇ 1 ಕೋಟಿ ಕ್ಲಬ್‌ ಗೆ ಸೇರ್ಪಡೆಯಾಗಿದ್ದಾರೆ. PKL 9 ಹರಾಜಿನಲ್ಲಿ ಪವನ್ ಸೆಹ್ರಾವತ್ ಮೇಲೆ ಎಲ್ಲಾ ಕಣ್ಣುಗಳು ಇದ್ದವು. ಪವನ್‌ ಹೆಸರು ಘೋಷಿಸುತ್ತಿದ್ದಂತೆ ತಮಿಳ್ ತಲೈವಾಸ್ ಮತ್ತು ಯು ಮುಂಬಾ ಪೈಪೋಟಿಗೆ ಬಿದ್ದು ಬಿಡ್‌ ಮಾಡಲಾರಂಭಿಸಿದವು. ಅಂತಿಮವಾಗಿ ಪವನ್‌ ಪಿಕೆಎಲ್‌ ಇತಿಹಾಸದಲ್ಲೇ ಅತಿಹೆಚ್ಚಿನ ಮೊತ್ತವಾದ ₹2.26 ಕೋಟಿಗೆ ತಲೈವಾಸ್‌ ಗೆ ಬಿಕರಿಯಾದರು. ಬೃಹತ್‌ ಮೊತ್ತವಾದ್ದರಿಂದ ಬೆಂಗಳೂರು ಬುಲ್ಸ್ ಎಫ್‌ಬಿಎಂ ಬಳಸಿ ಉಳಿಸಿಕೊಳ್ಳಲು ಮುಂದಾಗಲಿಲ್ಲ.
ಪವನ್‌ ಸೆಹ್ರಾವತ್‌ ತಂಡ ತೆರೆಯುವುದು ಖಚಿತವಾಗಿದ್ದರಿಂದ ಬೆಂಗಳೂರು ಬುಲ್ಸ್‌ ಈ ಹಿಂದೆ ಹರಿಯಾಣ ಸ್ಟೀಲರ್ಸ್ ತಂಡದ ಭಾಗವಾಗಿದ್ದ ವಿಕಾಶ್ ಕಂಡೋಲಾಗೆ ಬರೋಬ್ಬರಿ 1.70 ಕೋಟಿ ನೀಡಿ ಖರೀದಿಸಿದೆ. ಇದು PKL ಹರಾಜು ಇತಿಹಾಸದಲ್ಲಿ ಈ ವರೆಗಿನ ಎರಡನೇ ಅತ್ಯಂತ ದುಬಾರಿ ಖರೀದಿಯಾಗಿದೆ. 1.21 ಕೋಟಿ ರೂ.ಗೆ ಬಿಡ್‌ ಆದ ಗುಮಾನ್ ಸಿಂಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಬಿ ಗುಂಪಿನ  ಆಟಗಾರ ಎನಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!