ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ್ ಚಿತ್ರಗಳು ಅಭಿಮಾನಿಗ ನಿರೀಕ್ಷೆಗೆ ತಕ್ಕಂತೆ ಮೂಡಿ ಬರಲು ವಿಫಲವಾಗಿದ್ದು, ಇದರಿಂದ ಬೇಸರಗೊಂಡ ಅಕ್ಷಯ್ , ಸಿನಿಮಾಗಳು ಯಶಸ್ವಿಯಾಗದ ಹಿನ್ನೆಲೆ ಕೆಲ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಟ್‌ಪುಟ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಕುರಿತು ಮನಸ್ಸಿನ ಮಾತನ್ನು ಹಂಚಿಕೊಂಡ ನಟ ಅಕ್ಷಯ್, ತಮ್ಮ ಕೆಲ ಚಿತ್ರಗಳು ಯೋಜಿಸಿದಂತೆ ಕಾರ್ಯನಿರ್ವಹಿಸಲಿಲ್ಲಎಂದರು.
ಇನ್ನು ಕಟ್‌ಪುಟ್ಲಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಕುರಿತು ಮಾತನಾಡಿ, ‘ಚಲನಚಿತ್ರಗಳು ನಿರೀಕ್ಷಿಸಿದಂತೆ ಕಾರ್ಯನಿರ್ವಹಿಸುತ್ತಿಲ್ಲ, ಇದು ನಮ್ಮ ತಪ್ಪು, ಇದು ನನ್ನ ತಪ್ಪು. ನಾನು ಬದಲಾವಣೆಗಳನ್ನು ಮಾಡಬೇಕಾಗಿದೆ, ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಾನು ಬದಲಾವಣೆಗಳನ್ನು ಮಾಡಲು ಬಯಸುತ್ತೇನೆ. ಬೇರೆ ಯಾರನ್ನೂ ದೂಷಿಸಬೇಕಾಗಿಲ್ಲ, ಸೋಲಿಗೆ ದೂಷಿಸಬೇಕಾಗಿರುವುದು ನನ್ನನ್ನು ಮಾತ್ರ ಎಂದು ಹೇಳಿಕೊಂಡಿದ್ದಾರೆ.