ಭಾರತದಲ್ಲಿ ಗೋಧಿ ಸಹಿತ ಧಾನ್ಯಗಳ ಕೊರತೆ?: ಕೇಂದ್ರ ಸರಕಾರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ಪಾದನಾ ಕಡಿತದಿಂದ ಭಾರತ ಗೋಧಿ ಸೇರಿದಂತೆ ಧಾನ್ಯಗಳ ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿದೆ ಎಂದು ಬ್ಲೂಮ್‌ಬರ್ಗ್ ವರದಿಯನ್ನು ಭಾರತ ತಳ್ಳಿ ಹಾಕಿದೆ.

ನಮ್ಮಲ್ಲಿ ದೇಶಿಯ ಬಳಕೆಗೆ ಸಾಕಾಗುವಷ್ಟ ಗೋಧಿ ದಾಸ್ತಾನು ಇದೆ . ಭಾರತಕ್ಕೆ ಗೋಧಿ ಸೇರಿದಂತೆ ಆಹಾರ ಧಾನ್ಯ ಆಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆಹಾರ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ.

ಭಾರತದಲ್ಲಿ ದೇಶಿಯ ಬಳಕಿಗೆ ಬೇಕಾದಷ್ಟು ಗೋಧಿ ಸೇರಿದಂತೆ ಆಹಾರ ಧಾನ್ಯಗಳ ದಾಸ್ತಾನು ಇದೆ. ಸಾರ್ವಜನಿಕ ವಿತರಣೆಗೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಆಹಾರ ಸರಬರಾಜು ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

ಆಹಾರ ಧಾನ್ಯಗಳ ಬೇಡಿಕೆ, ಭಾರತದಲ್ಲಿನ ಕೊರತೆ, ಹಣದುಬ್ಬರಗಳಿಂದ ಆಮದು ಮಾರ್ಗ ಮಾತ್ರ ಉಳಿದಿದೆ. ಈ ಕುರಿತು ಬ್ಲೂಮ್‌ಬರ್ಗ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಇ ಮೇಲ್ ಮೂಲಕ ಸ್ಪಷ್ಟನೆ ಕೇಳಿತ್ತು. ಆದರೆ ಯಾವುದೇ ಉತ್ತರ ಬರದ ಕಾರಣ ಬ್ಲೂಮ್‌ಬರ್ಗ್ ಭಾರತ ಗೋಧಿ ಸೇರಿದಂತೆ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಿದೆ ಎಂಬ ವರದಿ ಪ್ರಕಟಿಸಿತ್ತು. ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ನಿರೀಕ್ಷೆಗೂ ಮೀರಿ ಭಾರತದಲ್ಲಿ ಗೋಧಿ ಉತ್ಪಾದಿಸಲಾಗುತ್ತಿದೆ.ವಿಶ್ವದ ಎರಡನೇ ಅತೀ ದೊಡ್ಡ ಗೋಧಿ ಉತ್ಪಾದಕ ದೇಶವಾಗಿರುವ ಭಾರತ 2022ರಲ್ಲಿ 106.84 ಮಿಲಿಯನ್ ಟನ್ ಗೋಧಿ ಉತ್ಪಾದಿಸಿದೆ. ಕಳೆದ ವರ್ಷ ಭಾರತ 106.41 ಮಿಲಿಯನ್ ಟನ್ ಗೋಧಿ ಉತ್ಪಾದಿಸಿತ್ತು. ವಿದೇಶಗಳಲ್ಲಿ ಬಿಸಿ ಗಾಳಿಯಿಂದ ಗೋಧಿ ಉತ್ಪಾದನೆಯಲ್ಲಿ ಸಮಸ್ಯೆ ಎದುರಾಗಿದೆ. ರೈತರು ಗೋಧಿಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಭಾರತದಲ್ಲೂ ಗೋಧಿ ಉತ್ಪಾದನೆಗೆ ಬಿಸಿ ಗಾಳಿ ಕೊಂಚ ಮಟ್ಟಿನ ತಲ್ಲಣ ಸೃಷ್ಟಿಸಿದೆ. ಆದರೆ ರೈತರಿಗೆ ನಷ್ಟ ತರುವ ಮಟ್ಟದಲ್ಲಿ ಯಾವುದೇ ಅಪಾಯ ಎದುರಾಗಿಲ್ಲ ಎಂದು ಕೇಂದ್ರ ಆಹಾರ ಇಲಾಖೆ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!