ಅಯ್ಯೋ ದುರ್ವಿಧಿಯೇ! 6 ವರ್ಷಗಳ ಹಿಂದೆ ಆರ್ಡರ್ ಮಾಡಿದ್ದ ಐಟಂ 2024ಕ್ಕೆ ಡೆಲಿವರಿ ಭಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ, ನಿಮ್ಮ ಪ್ಯಾಕೇಜ್ ಸಾಮಾನ್ಯವಾಗಿ 1-2 ಗಂಟೆಗಳ ಒಳಗೆ ಮತ್ತು ಒಂದು ವಾರದೊಳಗೆ ನಿಮ್ಮ ಮನೆಗೆ ತಲುಪುತ್ತದೆ. ಆದರೆ ನಾವು ನಿಮಗೆ ಹೇಳಲು ಹೊರಟಿರುವುದು ಖಂಡಿತವಾಗಿಯೂ ನಿಮ್ಮನ್ನು ಆಘಾತಗೊಳಿಸುತ್ತದೆ. 2018 ರಲ್ಲಿ, ಒಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಚಪ್ಪಲಿಗಳನ್ನು ಆರ್ಡರ್ ಮಾಡಿದ್ದನು. ಆದರೆ ಆ ಆರ್ಡರ್ 6 ವರ್ಷಗಳ ನಂತರ ಡೆಲಿವೆರಿ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.

ಅಹ್ಸಾನ್ ಎಂಬ ವ್ಯಕ್ತಿ ಫ್ಲಿಪ್‌ಕಾರ್ಟ್‌ನಲ್ಲಿ ಸ್ಪಾರ್ಕ್ಸ್ ಚಪ್ಪಲಿಗಳನ್ನು ಆರ್ಡರ್ ಮಾಡಿದ್ದಾರೆ. ಇದು 6 ವರ್ಷಗಳ ಹಿಂದೆ, 2018 ರಲ್ಲಿ ಮಾಡಲಾಗಿತ್ತು. ಡೆಲಿವರಿ ದಿನಾಂಕವು ಮೇ 20, 2018 ರಂದು ಆಗಿರುತ್ತದೆ ಎಂಬ ನೊಟಿಫಿಕೇಷನ್​​ ಬಂದಿದೆ. ಆದರೆ ಆ ತಾರೀಖಿಗೆ ಡೆಲಿವರಿ ಬಂದಿರಲಿಲ್ಲ.

ಅಂತಿಮವಾಗಿ, ಜೂನ್ 20, 2024 ರಂದು, ಗ್ರಾಹಕರು ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ನಿಂದ ಅನಿರೀಕ್ಷಿತ ಕರೆಯನ್ನು ಸ್ವೀಕರಿಸಿದರು. ಕಸ್ಟಮರ್ ಕೇರ್ ಸೇವಾ ವ್ಯಕ್ತಿಯು ಆರ್ಡರ್‌ಗೆ ಸಂಬಂಧಿಸಿದಂತೆ ಯಾವ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದು ವ್ಯಕ್ತಿಯನ್ನು ಕೇಳಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!