ಗೂಗಲ್ ಟ್ರಾನ್ಸ್ಲೇಟರ್ ವೇದಿಕೆ ಏರಿದ ತುಳು ಭಾಷೆ: ತುಳು ಬರಂದಿನಕ್ಲೆಗ್ ಕಲ್ಪೆರೆ ಇತ್ತೆ ಆತ್ಂಡ್ ನನಲಾ ಸುಲಭ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪ್ರಾದೇಶಿಕ ಭಾಷೆಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದಾಗಿ ಹೇಳಿದ್ದ ಜಾಗತಿಕ ಐಟಿ ದೈತ್ಯ ಗೂಗಲ್ ಈಗ ಅದನ್ನು ಅನುಷ್ಠಾನಕ್ಕೂ ತಂದಿದೆ.

ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ಈಗ ಕರಾವಳಿಯ ತುಳು ಭಾಷೆ ಕೂಡಾ ಸೇರ್ಪಡೆಯಾಗಿದೆ.
ಈ ಬೆಳವಣಿಗೆ ತುಳುವರಿಗೆ ಹಾಗೂ ತುಳು ಭಾಷಾ ಪ್ರೇಮಿಗಳಿಗೆ ಸಂತಸ ತಂದಿದೆ. ಯಾವುದೇ ಭಾಷೆ ಬಳಸಿ ತುಳು ಭಾಷೆಗೆ ಭಾಷಾಂತರ ಮಾಡುವ ಈ ಸೌಲಭ್ಯ ಇನ್ನಷ್ಟು ಸುಧಾರಣೆ ಕಾಣಬೇಕಿದೆಯಾದರೂ ಸದ್ಯ ತುಳು ಭಾಷೆಯ ಬಗ್ಗೆ ಗೂಗಲ್ ಕೂಡಾ ಕಾಳಜಿ ವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಈ ಸುದ್ದಿ ತುಳುವಿನಲ್ಲಿ ಹೇಗಿರುತ್ತದೆ ಎಂದು ನೋಡಲು ಈಗಲೇ ಒಮ್ಮೆ ಗೂಗಲ್ ಟ್ರಾನ್ಸ್ಲೇಟರ್ ಓಪನ್ ಮಾಡಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!