ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಮದ್ಯ, ಗರ್ಭನಿರೋಧಕ ಮಾತ್ರೆ: ಪೋಷಕರಿಗೆ ಸದ್ಗುರು ಕೊಟ್ಟ ಎಚ್ಚರಿಕೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಮದ್ಯ, ಗರ್ಭನಿರೋಧಕ ಮಾತ್ರೆಗಳು ದೊರೆತಿರುವುದು ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಇಶಾ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ್ದಾರೆ.

ಶಿಕ್ಷಕರು ಮತ್ತು ಪೋಷಕರು ಇಂಥ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕು.ಸರಿಯಾದ ಮಾದರಿಯನ್ನು ಹುಟ್ಟಹಾಕಬೇಕಾದ ಅಗತ್ಯವಿರುವ ಮೂಲ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೀವು ಮಕ್ಕಳನ್ನು ಹೊಂದಲು ನಿರ್ಧರಿಸಿದರೆ, ಅದು 20 ವರ್ಷದ ಪ್ರಾಜೆಕ್ಟ್. ಒಂದು ವೇಳೆ ಚೆನ್ನಾಗಿ ಮಾಡದಿದ್ದರೆ, ಅದು ಲೈಫ್ ಟೈಮ್ ಪ್ರಾಜೆಕ್ಟ್ ಆಗಬಹುದು. ಈ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಸಿದ್ಧರಿಲ್ಲದಿದ್ದರೆ, ಮಕ್ಕಳನ್ನು ಮಾಡಿಕೊಳ್ಳಲು ಹೋಗಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

ಪೋಷಕರ ನಡತೆಯಿಂದ ಮಕ್ಕಳು ಹೇಗೆ ಬದುಕುತ್ತಾರೆ ಎಂದು ಅವಲಂಬನೆಯಾಗಿರುತ್ತದೆ. ಉದಾಹರಣೆಗೆ, ಪೋಷಕರು 20ನೇ ವಯಸ್ಸಿನಲ್ಲಿ ಮದ್ಯಪಾನ ಮಾಡಲು ಪ್ರಾರಂಭಿಸಿದರೆ, ಅವರ ಮಕ್ಕಳು 15 ರ ಆಸುಪಾಸಿನಲ್ಲಿ ಕುಡಿಯಲು ಆರಂಭಿಸುತ್ತಾರೆ. ಒಬ್ಬರ ನೈತಿಕತೆ ಮತ್ತು ಮೌಲ್ಯಗಳು ಏನೇ ಇರಲಿ. ನೀವು ಧೂಮಪಾನ ಮಾಡುತ್ತಿರುವುದನ್ನು ಅಥವಾ ಒಂದು ನಿರ್ದಿಷ್ಟ ರೀತಿಯ ಜೀವನವನ್ನು ಮಕ್ಕಳು ಕಂಡರೆ, ಅವರು ಬೇಗನೆ ಅದರ ಕಡೆಗೆ ವಾಲುತ್ತಾರೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!