ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಮದುವೆ ಸುದ್ದಿ?: ನಟ ಕಾರ್ತಿಕ್ ಆರ್ಯನ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೆಲವೇ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ಅವರು ಅಭಿನಯಿಸಿದ ಭೂಲ್ ಭುಲೈಯಾ-2 ಸಿನಿಮಾದ ಸಕ್ಸಸ್ ಬಳಿಕ ಕಾರ್ತಿಕ್ ಮತ್ತೆ ಫ್ರೆಡ್ಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.

ಸಿನಿಮಾಕ್ಕಿಂತ ಕಾರ್ತಿಕ್ ವೈಯಕ್ತಿಕ ವಿಚಾರ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಹೆಚ್ಚಾಗಿಸಾರಾ ಅಲಿ ಖಾನ್ ಮತ್ತು ಕೃತಿ ಸನೊನ್ ಜೊತೆ ಕಾರ್ತಿಕ್ ಆರ್ಯನ್ ಹೆಸರು ಥಳಕು ಹಾಕಿಕೊಂಡಿತ್ತು. ಅದು ಬಿಟ್ಟರೆ ಕಾರ್ತಿಕ್ ಆರ್ಯನ್ ಹೆಚ್ಚಾಗಿ ವಿವಾದಗಳಲ್ಲಿ ಸಿಲುಕಿಕೊಂಡಿಲ್ಲ.

ಇದೀಗ ಕಾರ್ತಿಯನ್ ಆರ್ಯನ್ ಮದುವೆ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಸದ್ಯದಲ್ಲೇ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಕಾರ್ತಿಕ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತನ್ನ ಮದುವೆ ಬಗ್ಗೆ ಕುಟುಂಬದಿಂದನೂ ಯಾವುದೇ ಒತ್ತಡ ಇಲ್ಲ ಹಾಗಾಗಿ ಸದ್ಯದಲ್ಲೇ ಮದುವೆ ಇಲ್ಲ ಸ್ವಷ್ಟಪಡಿಸಿದ್ದಾರೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮದುವೆ ಆಗಲ್ಲ ಎಂದು ಹೇಳಿದ್ದಾರೆ. ‘ನಾನು ಸದ್ಯ ನನ್ನ ಕೆಲಸದ ಕಡೆ ಮಾತ್ರ ಗಮ ಹರಿಸಿದ್ದೀನಿ. ಅದೃಷ್ಟವಶಾತ್, ಅವರಿಂದ (ಕುಟುಂಬದವರಿಗೆ) ಇನ್ನೂ ಯಾವುದೇ ಒತ್ತಡವಿಲ್ಲ. ನನ್ನ ಜೀವನದಲ್ಲಿ ಪ್ರೀತಿಗೆ ಖಂಡಿತವಾಗಿಯೂ ಅವಕಾಶವಿದೆ’ ಎಂದು ಕಾರ್ತಿಕ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!