Wednesday, June 29, 2022

Latest Posts

ಮದ್ಯ ಸೇವಿಸಿ ರಂಪಾಟ: ಗಟ್ಟಿಮೇಳ ಧಾರವಾಹಿಯ ನಟರ ವಿರುದ್ಧ ಎಫ್ಐಆರ್ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕನ್ನಡ ಕಿರುತೆರೆಯ, ಗಟ್ಟಿಮೇಳ ಧಾರವಾಹಿಯ ನಟರು ಮದ್ಯ ಸೇವಿಸಿ ಮಾಡಿದ ರಂಪಾಟ ಪ್ರಕರಣಕ್ಕೆ ಸಂಬಂಧಿಸಿ ನಟ ರಕ್ಷಿತ್ ಸೇರಿ 7 ಜನರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನೈಟ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿ ಗಟ್ಟಿಮೇಳ ಸೀರಿಯಲ್ ನಟರು ಪಾರ್ಟಿ ಮಾಡಿದ್ದರು. ಕೆಂಗೇರಿ ಬಳಿಯ ಲೇಕ್ ವ್ಯೂ ರೆಸಾರ್ಟ್‌ನಲ್ಲಿ ಜನವರಿ 27ರ ಮಧ್ಯರಾತ್ರಿ 1.45ರ ಸಮಯದಲ್ಲಿ ಮ್ಯೂಸಿಕ್ ಹಾಕಿ ಕುಡಿದು ಗಲಾಟೆ ನೆಡೆಸಿದ್ದರು.ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಯ ಜೊತೆಗೂ ಗಲಾಟೆ ಮಾಡಿ ದಾಂಧಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ ಗಟ್ಟಿಮೇಳ ಸೀರಿಯಲ್ ​​ನಟ ರಕ್ಷಿತ್​​​​​​ ಎ1 ಆರೋಪಿ, ಎ2 ನಟ ಅಭಿಷೇಕ್, ಎ3 ನಟ ರಂಜನ್, ಎ4 ನಟ ರಾಕೇಶ್, ಎ5 ನಟ ರವಿಚಂದ್ರನ್, ಎ6 ನಟ ರಕ್ಷಿತ್​​ ಪತ್ನಿ ಅನುಷಾ, ಎ7 ಸೀರಿಯಲ್​​​​​ ನಟಿ ಶರಣ್ಯಾ ಪ್ರಕರಣದ ಆರೋಪಿಗಳಾಗಿದ್ದು, ಇವರೆಲ್ಲರ ವಿರುದ್ಧ ಎನ್‌ಡಿಎಂಎ ಆ್ಯಕ್ಟ್ ಅಡಿಯಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss