ಮದ್ಯಪ್ರಿಯರೇ ಈ ಶಾಕಿಂಗ್ ಸುದ್ದಿ ನೀವು ಓದಲೇಬೇಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಚುನಾವಣೆವೆ ಇನ್ನೇನು ಎರಡೇ ದಿನ ಬಾಕಿಯಿದೆ, ಹೀಗಿರುವಾದ ಇಂದು ಬಹಿರಂಗ ಪ್ರಚಾರಕ್ಕೆ ಕಡೆ ದಿನವಾಗಿದೆ.

ಸಂಜೆ 5 ರ ನಂತರ ಯಾವುದೇ ಸಭೆ, ಸಮಾರಂಭ, ರೋಡ್ ಶೋಗಳನ್ನು ನಡೆಸುವಂತಿಲ್ಲ, ಇದರ ಬೆನ್ನಲ್ಲೇ ಮದ್ಯಪ್ರಿಯರಿಗೂ ಶಾಕಿಂಗ್ ಸುದ್ದಿಯಿದೆ!

ಹೌದು, ಇಂದು ಸಂಜೆ 6 ಗಂಟೆಯಿಂದ ಮೂರು ದಿನಗಳ ಕಾಲ ಮದ್ಯ ಸಿಗುವುದಿಲ್ಲ. ಹೌದು, ಮೇ.11ರವರೆಗೂ ಮದ್ಯ ಸರಬರಾಜು ಇರುವುದಿಲ್ಲ. ಮೇ. 8,9,10 ರಂದು ಡ್ರೈ ಡೇ ಆಚರಿಸಲು ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

13ರ ಬೆಳಗ್ಗೆ 6 ಗಂಟೆಯಿಂದ ಮೇ. 14ರ ಬೆಳಗ್ಗೆ 6 ಗಂಟೆವರೆಗೂ ಮದ್ಯಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಇಂದು ಮದ್ಯ ಖರೀದಿಗೆ ಸಾಕಷ್ಟು ಜನ ಮುಗಿಬೀಳುವ ಸಾಧ್ಯತೆ ಇದೆ, ಜನ ಬಂದೇ ಬರುವ ನಿರೀಕ್ಷೆ ಇರುವ ಕಾರಣ ಮದ್ಯದ ಬೆಲೆಯು ದುಬಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!