ಪೆರುವಿನ ಚಿನ್ನದ ಗಣಿಯಲ್ಲಿ ಭಾರೀ ಅಗ್ನಿ ಅವಘಡ: 27 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೆರುವಿನ ಚಿನ್ನದ ಗಣಿಯಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ 27 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಚಿನ್ನದ ಗಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾಂಕ್ವಿಹುವಾ ಈ ಚಿಕ್ಕ ಚಿನ್ನದ ಗಣಿ ನಡೆಸುತ್ತಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಕಂಪನಿಯಿಂದ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸ್ಥಳೀಯ ಪ್ರಾಸಿಕ್ಯೂಟರ್ ಜಿಯೋವಾನಿ ಮ್ಯಾಟೋಸ್ ಸ್ಥಳೀಯ ಸುದ್ದಿವಾಹಿನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಚಿನ್ನದ ಗಣಿ ಬೆಂಕಿ ಅವಘಡದಲ್ಲಿ 27 ಜನರು ಸಾವನ್ನಪ್ಪಿದ್ದಾರೆ ಎಂದು ಯಾಂಕ್ವಿಹುವಾ ಪೊಲೀಸ್ ಠಾಣೆ ದೃಢಪಡಿಸಿದೆ.

ಸಂತ್ರಸ್ತರ ಶವಗಳನ್ನು ಹೊರತೆಗೆಯುವ ಮೊದಲು ರಕ್ಷಣಾ ತಂಡಗಳು ಗಣಿ ಭದ್ರತೆಗೆ ಪ್ರಯತ್ನಿಸುತ್ತಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅರೆಕ್ವಿಪಾ ಪ್ರದೇಶದ ಲಾ ಎಸ್ಪೆರಾಂಜಾ ಗಣಿಯಲ್ಲಿರುವ ಸುರಂಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಪೆರು ವಿಶ್ವದ ಅಗ್ರ ಹಾಗೂ ಎರಡನೇ ಅತಿದೊಡ್ಡ ತಾಮ್ರ ಉತ್ಪಾದಿಸುವ ದೇಶ, ಪೆರುವಿನ ಇಂಧನ ಮತ್ತು ಗಣಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈ ಘಟನೆಯು 2000 ರಿಂದೀಚೆಗೆ ನಡೆದ ಅತ್ಯಂತ ಭೀಕರ ಗಣಿ ಅಪಘಾತವಾಗಿದೆ. ಇಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!