ಆಲಿಯಾ ನನ್ನ ಮೊದಲನೇ ಪತ್ನಿ ಅಲ್ಲ: ರಣಬೀರ್‌ ಶಾಕಿಂಗ್‌ ನ್ಯೂಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಯಂಗ್ ಹೀರೋ ರಣಬೀರ್ ಕಪೂರ್ ಇತ್ತೀಚೆಗಷ್ಟೇ ತಮ್ಮ ಗೆಳತಿ ಆಲಿಯಾ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಇಬ್ಬರೂ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.  ಶಂಶೇರಾ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ, ರಣಬೀರ್ ತಮ್ಮ ಮದುವೆಯ ಬಗ್ಗೆ ಶಾಕಿಂಗ್‌ ಹೇಳಿಕೆಗಳನ್ನು ನೀಡಿದ್ದಾರೆ. ಆಲಿಯಾ ಅವರ ಎರಡನೇ ಪತ್ನಿ ಎಂಬ ಆಘಾತಕಾರಿ ಸುದ್ದಿ ತಿಳಿಸಿದ್ದಾರೆ. ”ಆಲಿಯಾ ನನ್ನ ಎರಡನೇ ಪತ್ನಿ. ಹಿಂದೆ ಹೇಗೋ ಒಂದು ಘಟನೆ ನಡೆದಿದೆ. ಆ ಘಟನೆ ಬಹಳ ಕ್ರೇಜಿಯಾಗಿದೆ. ನಾನು ನಾಯಕನಾಗಿ ಸಿನಿ ಇಂಡಸ್ಟ್ರಿಗೆ ಕಾಲಿಟ್ಟಾಗ ಒಬ್ಬ ಲೇಡಿ ಅಭಿಮಾನಿ ನಮ್ಮ ಮನೆಗೆ ಬಂದು ನಮ್ಮ ಮನೆಯ ಗೇಟ್‌ಅನ್ನು ಮದುವೆಯಾಗಿದ್ದಾರೆ.

ನಾನು ಮನೆಗೆ ಬಂದಾಗ ನಮ್ಮ ಸೆಕ್ಯೂರಿಟಿ ಆ ವಿಷಯ ಹೇಳಿದ್ದಾರೆ. ನಮ್ಮ ಗೇಟ್‌ಗೆ ಹಾರ ಹಾಕಿ, ಅದರ ಮೇಲೆ ಕುಂಕುಮ ಅರಿಶಿಣವನ್ನು ಹಾಕಿ, ಅದರ ಮೇಲೆ ಹೂವುಗಳನ್ನು ಚೆಲ್ಲಿ, ನನಗೂ ಆಕೆಗೂ ಮದುವೆಯಾಗಿದೆ ಅಂತ ಹೇಳಿ ಹೊರಟು ಹೋದಳಂತೆ. ಹಾಗಾಗಿಯೇ ಆಕೆ ನನ್ನ ಮೊದಲ ಹೆಂಡತಿ, ಆಲಿಯಾ ರೆಡನೇ ಪತ್ನಿ ಎಂದರು. ನಾನು ನನ್ನ ಮೊದಲ ಹೆಂಡತಿಯನ್ನು ನೋಡಿಲ್ಲ. ಅಂತಹ ಹುಚ್ಚುತನ ಮಾಡಿದ ಹುಡುಗಿಯನ್ನು ನೋಡಬೇಕ ಎಂದು ನಗುತ್ತಾ ಹೇಳಿದರು. ಆದರೆ ಈ ಬಗ್ಗೆ ಆಲಿಯಾ ಭಟ್‌ ರಿಯಾಕ್ಷನ್‌ ಏನು ಎಂಬುದನ್ನು ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!