ಚೊಚ್ಚಲ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 41 ಬಾರಿಯ ಚಾಂಪಿಯನ್ ಮುಂಬೈಯನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಮಧ್ಯಪ್ರದೇಶ ತಂಡವು ತನ್ನ ಚೊಚ್ಚಲ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿದೆ.
ಮುಂಬೈ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ನೀಡಿದ 108 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಮಧ್ಯಪ್ರದೇಶ ಕೇವಲ 30 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ ಮೊದಲ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ನಡೆಸುತ್ತಿದೆ.
ಮೊದಲ ಇನ್ನಿಂಗ್ಸ್‌ ನಲ್ಲಿ ಮುಂಬೈ ಕಲೆಹಾಕಿದ್ದ 374 ರನ್ ಗಳಿಗೆ ಉತ್ತರವಾಗಿ ಮಧ್ಯಪ್ರದೇಶ ಪ್ರಥಮ ಇನ್ನಿಂಗ್ಸ್‌ ನಲ್ಲಿ 536 ರನ್‌ ಗಳ ಬೃಹತ್‌ ಮೊತ್ತ ದಾಖಲಿಸಿತ್ತು. ಮಧ್ಯಪ್ರದೇಶ ಪರ ಯಶ್‌ ದುಬೆ, ಶುಭಂ ಶರ್ಮಾ ಹಾಗೂ ರಜತ್‌ ಪಟೀದಾರ್‌ ಶತಕ ಸಿಡಿಸಿ ಅಬ್ಬರಿಸಿದ್ದರು. 162 ರನ್‌ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಮುಂಬೈ ಸಾಧಾರಣ ಮೊತ್ತಕ್ಕೆ ಕುಸಿಯಿತು. ಸುವೇದ್ ಪಾರ್ಕರ್ (51) ಸರ್ಫರಾಜ್ ಖಾನ್(45) ರನ್‌ ನಾಯಕ ಪೃಥ್ವಿ ಶಾ (44) ಹೊರತುಪಡಿಸಿ ಉಳಿದವರಿಂದ ಉತ್ತಮ ಆಟ ಮೂಡಿಬರಲಿಲ್ಲ. ಇದರಿಂದಾಗಿ ತಂಡ ಎರಡನೇ ಇನ್ನಿಂಗ್ಸ್‌ ನಲ್ಲಿ 269 ರನ್‌ಗಳಿಗೆ ಆಲೌಟ್ ಆಲೌಟ್‌ ಆಯಿತು.
ಮಿಸ್ಟ್ರೀ ಸ್ಪಿನ್ನರ್ ಕುಮಾರ್ ಕಾರ್ತಿಕೇಯ 98 ರನ್‌ ನೀಡಿ 4 ವಿಕೆಟ್‌ ಕಬಳಿಸುವ ಮೂಲಕ ಮುಂಬೈ ಕುಸಿತಕ್ಕೆ ಕಾರಣರಾದರು. ಗೌರವ್ ಯಾದವ್ ಮತ್ತು ಪಾರ್ಥ್ ಸಹಾನಿ ತಲಾ ಎರಡು ವಿಕೆಟ್ ಪಡೆದರು.
ಗೆಲುವಿಗೆ 108 ರನ್‌ಗಳ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ಎರಡನೇ ಸೆಷನ್‌ನಲ್ಲಿ ಶುಭಂ ಶರ್ಮಾ (30) ಮತ್ತು ರಜತ್ ಪಾಟಿದಾರ್ ಅವರ ಅಜೇಯ 30 ರನ್‌ಗಳ ನೆರವಿನಿಂದ 4 ವಿಕೆಟ್‌ ಗಳನ್ನು ಕಳೆದುಕೊಂಡು ಗುರಿ ತಲುಪಿತು. ಮಧ್ಯಪ್ರದೇಶ ತಂಡದ ಆಟಗಾರರು ಚೊಚ್ಚಲ ಟ್ರೋಫಿ ಗೆದ್ದ ಸಂತೋಷದಲ್ಲಿ ಮಿಂದೇಳುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!