ಮುದ್ದಾದ ಮಹಾಲಕ್ಷ್ಮಿಗೆ ಜನ್ಮ ನೀಡಿದ ಆಲಿಯಾ: ಸಂಭ್ರಮದಲ್ಲಿ ರಣಬೀರ್‌ ಕುಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ದಂಪತಿ ಆಲಿಯಾ ಭಟ್ ಹಾಗೂ ರಣಬೀರ್‌ ಕಪೂರ್‌ ಕುಟುಂಬಲ್ಲಿ ಸಂಭ್ರಮ ಮನೆ ಮಾಡಿದೆ. ಮನೆ ಬೆಳಗುವ ಮುದ್ದು ಮಹಾಲಕ್ಷ್ಮಿಗೆ ಆಲಿಯಾ ಜನ್ಮ ನೀಡಿದ್ದಾರೆ. ಮುಂಬೈನ ರಿಲಯನ್ಸ್ ಆಸ್ಪತ್ರೆಗೆ ಇಂದು ಬೆಳಗ್ಗೆ ದಾಖಲಾಗಿದ್ದ ಆಲಿಯಾ ಭಟ್ ಸ್ವಲ್ಪ‌ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆಲಿಯಾ ಮತ್ತು ರಣಬೀರ್ ಕುಟುಂಬ ಆಸ್ಪತ್ರೆಯಲ್ಲಿದ್ದು, ಎರಡೂ ಕುಟುಂಬದಲ್ಲೂ ಸಂಭ್ರಮ ಮುಗಿಲುಮುಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಮತ್ತು ಅನೇಕ ಸೆಲೆಬ್ರಿಟಿಗಳು ರಣಬೀರ್ ಮತ್ತು ಆಲಿಯಾ ದಂಪತಿಗೆ ವಿಶ್ ಮಾಡುತ್ತಿದ್ದಾರೆ. ಆದರೆ ಈ ವಿಚಾರವನ್ನು ಕುಟುಂಬಸ್ಥರು ಇನ್ನೂ ಸ್ಪಷ್ಟಪಡಿಸಿಲ್ಲ.

ಗರ್ಭಿಣಿಯಾದ ನಂತರವೂ ಆಲಿಯಾ ಸಿನಿಮಾ ಶೂಟಿಂಗ್ ಮತ್ತು ಪ್ರಚಾರದಲ್ಲಿ ಭಾಗವಹಿಸಿದ್ದರು. ಬ್ರಹ್ಮಾಸ್ತ್ರ ಬಿಡುಗಡೆಯಾದ ನಂತರ ಆಲಿಯಾ ಮನೆಯಲ್ಲಿ ವಿಶ್ರಾಂತಿ ಪಡೆದರು. ಡೆಲಿವರಿ ಆಗಿ ಒಂದು ವರ್ಷವಾದರೂ ಶೂಟಿಂಗ್ ಶುರು ಮಾಡದಿರಲು ಆಲಿಯಾ ನಿರ್ಧರಿಸಿದ್ದರು. ಸದ್ಯ ರಣಬೀರ್ ಕೂಡ ಸಿನಿಮಾಗಳಿಂದ ಬಿಡುವು ಮಾಡಿಕೊಂಡು ಆಲಿಯಾ ಜೊತೆಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!