ʼ1980ರ ದಶಕಕ್ಕೆ ಮರಳುವ ಮುನ್ನ ಪರಿಸ್ಥಿತಿ ನಿಯಂತ್ರಿಸಿʼ: ಆಪ್ ವೈಫಲ್ಯವನ್ನು ಖಂಡಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ʼಇಂದು ರಾಜ್ಯದಲ್ಲಿ ನಡೆಯುತ್ತಿರುವ ವಿಷಯಗಳು ನಮಗೆ 1980 ರ ದಶಕದ ಕರಾಳ ಯುಗವನ್ನು ನೆನಪಿಸುತ್ತಿವೆ. ಇದು ತುಂಬಾ ಕಳವಳಕಾರಿಯಾಗಿದೆ. ಸರ್ಕಾರ ಕೂಡಲೇ ಪರಿಸ್ಥಿತಿ ನಿಯಂತ್ರಿಸಬೇಕುʼ ಎಂದು ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹೇಳಿದ್ದಾರೆ. ಶುಕ್ರವಾರ ಅಮೃತಸರದಲ್ಲಿ ಶಿವಸೇನಾ ಮುಖಂಡ ಸುಧೀರ್ ಸೂರಿ ಹತ್ಯೆಯನ್ನು ಖಂಡಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಶುಕ್ರವಾರ ಅಮೃತಸರದಲ್ಲಿ ಶಿವಸೇನಾ ಮುಖಂಡ ಸುಧೀರ್ ಸೂರಿ ಹತ್ಯೆಯಾಗಿ 24 ಗಂಟೆಗಳಾದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಂಪೂರ್ಣ ವೈಫಲ್ಯ ವನ್ನು ಖಂಡಿಸಿದ್ದಾರೆ.

ಎಎಪಿ ಸರ್ಕಾರವು ಅಂತಹ ಆತಂಕಕಾರಿ ಪರಿಸ್ಥಿತಿಯನ್ನು ನಿಭಾಯಿಸಲು ಯಾವುದೇ ಒಲವನ್ನು ಅಥವಾ ಯಾವುದೇ ಸಾಮರ್ಥ್ಯವನ್ನು ತೋರಿಸಿಲ್ಲ. ಒಮ್ಮೆ ನೀವು ನಿಮ್ಮ ದೌರ್ಬಲ್ಯ ಮತ್ತು ನ್ಯೂನತೆಗಳನ್ನು ತಿಳಿಸಿದರೆ, ದೇಶವಿರೋಧಿ ಶಕ್ತಿಗಳು ಅದರ ಲಾಭವನ್ನು ಪಡೆದುಕೊಳ್ಳಲು ಬದ್ಧವಾಗಿರುತ್ತವೆ ಮತ್ತು ಪಂಜಾಬ್‌ನಲ್ಲಿ ಈಗ ನಿಖರವಾಗಿ ಇದೇ ನಡೆಯುತ್ತಿದೆ ಎಂದ ಅವರು ಪರೋಕ್ಷವಾಗಿ ಆಪ್‌ ಸರ್ಕಾರ ಬಂದ ನಂತರ ಪಂಜಾಬ್‌ನಲ್ಲಿ ದೇಶ ವಿರೋಧಿ ಶಕ್ತಿಗಳ ಚಟುವಟಿಕೆ ಹೆಚ್ಚಿದೆ ಎಂದು ಉಲ್ಲೇಖಿಸಿದ್ದಾರೆ.

ಶುಕ್ರವಾರ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಗರದ ದೇವಸ್ಥಾನದ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಶಿವಸೇನೆ ಮುಖಂಡರು ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಗುಂಪಿನಿಂದ ಯಾರೋ ಬಂದು ಸೂರಿ ಅವರಿಗೆ ಗುಂಡು ಹಾರಿಸಿದ್ದಾರೆ. ಈ ಕುರಿತು ಹಲವರು ಘಟನೆಯನ್ನು ಖಂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!