BOLLYWOOD | ಒಂದೇ ಫ್ರೇಮ್‌ನಲ್ಲಿ ಆಲಿಯಾ-ಕರೀನಾ, ಏನ್ ವಿಷ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಆಲಿಯಾ ಹಾಗೂ ಕರೀನಾ ಕಪೂರ್ ಕಸಿನ್ಸ್, ಇವರಿಬ್ಬರು ಒಂದೇ ಫ್ರೇಮ್‌ನಲ್ಲಿ ಕಾಣಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿ ಸಿಹಿ ಸುದ್ದಿ ಸಿಕ್ಕಿದೆ.

ಕರೀನಾ ಕಪೂರ್ ಜೊತೆ ನಿಂತು ಆಲಿಯಾ ಭಟ್ ಪೋಸ್ ನೀಡಿದ್ದಾರೆ. ಈ ಫೋಟೋಗೆ ಅವರು ‘ಒಂದೇ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಕೊಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಮನವಿಯನ್ನು ಯಾವುದಾದರೂ ನಿರ್ಮಾಪಕರು ಗಂಭೀರವಾಗಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಆಲಿಯಾ ಭಟ್ ಹಾಗೂ ಕರೀನಾ ಕಪೂರ್ ಜಾಹೀರಾತೊಂದರಲ್ಲಿ ಒಟ್ಟಿಗೇ ಅಭಿನಯ ಮಾಡ್ತಿದ್ದಾರೆ. ಈ ಬಗ್ಗೆ ಆಲಿಯಾ ಪೋಸ್ಟ್ ಮಾಡಿದ್ದು, ನಮಗೆ ಒಟ್ಟಿಗೇ ನಟಿಸೋಕೆ ಇಷ್ಟವಿದೆ ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ಕಾಣಿಸಿಕೊಂಡಿದ್ದು ಜಾಹೀರಾತಿಗಾಗಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ.ಆಲಿಯಾ ಹಾಗೂ ಕರೀನಾ ಇಬ್ಬರೂ ಗ್ಲಾಮರಸ್ ಆಗಿ ತಯಾರಾಗಿದ್ದು, ಕರೀನಾರನ್ನು ಆನ್‌ಸ್ಕ್ರೀನ್ ನೋಡಲು ಅಭಿಮಾನಿಗಳ ಕಾತರರಾಗಿದ್ದಾರೆ. ಆಲಿಯಾ ಮಗುವಿನ ಜನನದ ನಂತರವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕರೀನಾ ಮಕ್ಕಳಾದ ಮೇಲೆ ಬಿಗ್ ಬ್ರೇಕ್ ತೆಗದುಕೊಂಡಿದ್ದು, ಸಿನಿಮಾ ಆಯ್ಕೆ ಮಾಡೋದ್ರದಲ್ಲಿ ಚೂಸಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here