ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟರ್ನಲ್ಲೂ ಟ್ರೆಂಡ್ ಸೃಷ್ಟಿಸಿದೆ.
ಸುಮಾರು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಂದು ಸಪ್ತಪದಿ ತುಳಿದಿದ್ದಾರೆ.ಕ್ಯಾಮೆರಾಗೆ ಪೋಸ್ ನೀಡಿದ ಬಾಲಿವುಡ್ ಜೋಡಿ ಮುಂಬೈನ ಬಾಂದ್ರಾದಲ್ಲಿರುವ ಮನೆಯಲ್ಲಿ ವಿವಾಹ ಸಂಭ್ರಮ ನೆರವೇರಿದೆ. ಮದುವೆಯ ಬಳಿಕ ಆಲಿಯಾ ಮತ್ತು ರಣಬೀರ್ ತಮ್ಮ ಮನೆಯ ಟೆರೇಸ್ ಮೇಲೆ ನಿಂತುಕೊಂಡು ಫೋಟೋ ತೆಗೆದುಕೊಂಡ ವಿಡಿಯೋ, ಫೋಟೋಗಳು ವೈರಲ್ ಆಗಿವೆ.
ಭಾರಿ ಗೌಪ್ಯತೆಯಿಂದ ನಡೆದ ಬಾಲಿವುಡ್ ಜೋಡಿಯ ಈ ಮದುವೆ ಇಂದು ಕೊನೆಗೂ ಬಹಿರಂಗವಾಗಿದೆ. ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಮದುವೆಯನ್ನು ದೃಢೀಕರಿಸಿದ್ದಾರೆ
ಬಿಳಿ ಶೇರ್ವಾನಿಯಲ್ಲಿರುವ ಪೇಟ ಧರಿಸಿರುವ ರಣಬೀರ್, ಲೈಟ್ ವೈಟ್ ಬಣ್ಣದ ಸೀರೆಯಲ್ಲಿರುವ ಬೆಡಗಿ ಆಲಿಯಾ ಮಿಂಚಿದ್ದಾರೆ.