ಗರ್ಭಿಣಿಯಾದರೂ ಮರುಭೂಮಿಯಲ್ಲಿ ಆಲಿಯಾ ಸಾಹಸ: ಶೂಟಿಂಗ್‌ ದೃಶ್ಯಗಳು ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಏಪ್ರಿಲ್ 14 ರಂದು ವಿವಾಹವಾದ ಬಾಲಿವುಡ್‌ ಜೋಡಿ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ತಂದೆ-ತಾಯಿಯಾಗುವ ಖುಷಿಯಲ್ಲಿದ್ದಾರೆ. ಸಾಮಾನ್ಯವಾಗಿ ಗರ್ಭಿಣಿ ಅಂತ ಗೊತ್ತಾದ್ರೆ ಸಾಕು ಎಲ್ಲ ಕೆಲಸಗಳನ್ನು ಬದಿಗಿಟ್ಟು, ರೆಸ್ಟ್‌ ತಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಾರೆ. ಆದರೆ, ಆಲಿಯಾ ಭಟ್‌ ವಿಚಾರದಲ್ಲಿ ಇದು ಹೊರತಾಗಿದೆ. ಗರ್ಭಿಣಿಯಾದರೂ ಸಹ ಕಮಿಟ್‌ ಆಗಿರುವ ಶೂಟಿಂಗ್‌ ಅನ್ನು ಮುಗಿಸುತ್ತಿದ್ದಾರೆ. ಪ್ರಸ್ತುತ ಹಾಲಿವುಡ್ ನಲ್ಲಿ ‘ಹಾರ್ಟ್ ಆಫ್ ಸ್ಟೋನ್’ ಎಂಬ ಸಿನಿಮಾದಲ್ಲಿ ಆಲಿಯಾ ನಟನೆಯ ದೃಶ್ಯ ವೈರಲ್‌ ಆಗಿವೆ.

ಹಾರ್ಟ್ ಆಫ್ ಸ್ಟೋನ್ ಚಿತ್ರದ ಶೂಟಿಂಗ್ ಪೋರ್ಚುಗಲ್ ನ ಮರುಭೂಮಿಯಲ್ಲಿ ನಡೆದಿದೆ. ಆಲಿಯಾ ಭಟ್ ಅವರ ಬೇಬಿ ಬಂಪ್ ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಂದರ್ಭದಲ್ಲಿಯೂ ಸಿನಿಮಾ ಅವಶ್ಯಕತೆ ಇದೆಯಾ ಎಂದು ಕೆಲವರು ಪ್ರಶ್ನೆ ಮಾಡಿದ್ರೆ, ಇನ್ನೂ ಕೆಲವರು ಕೆಲಸದ ಮೇಲಿರುವ ನಿಷ್ಠತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!