ವಿವಾದದ ಕಿಡಿ ಹೊತ್ತಿಸಿದ ಅಲೀಘಡ ಮುಸ್ಲಿಂ ವಿವಿ ಭಾನುವಾರದ ಊಟದ ಮೆನು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಲೀಘಡ ಮುಸ್ಲಿಂ ವಿಶ್ವವಿದ್ಯಾಲಯದ ಭಾನುವಾರದ ಊಟದ ಮೆನು ವಿವಾದದ ಕಿಡಿ ಹೊತ್ತಿಸಿದೆ.

ಸರ್ ಶಾ ಸುಲೇಮಾನ್ ಹಾಲ್ ನಲ್ಲಿ ಭಾನುವಾರದ ಊಟದಲ್ಲಿ ಬೀಫ್ ಬಿರಿಯಾನಿ ವಿತರಿಸುವಂತೆ ಸೂಚಿಸಲಾಗಿರುವ ನೊಟೀಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.
ಇಬ್ಬರು ಅಧಿಕೃತ ವ್ಯಕ್ತಿಗಳು ಹೊರಡಿಸಿದ್ದಾರೆಂದು ಹೇಳಲಾದ ನೋಟಿಸ್‌ನಲ್ಲಿ, ಭಾನುವಾರದ ಊಟದ ಮೆನುವನ್ನು ಬದಲಾಯಿಸಲಾಗಿದೆ ಮತ್ತು ಬೇಡಿಕೆಯ ಮೇರೆಗೆ ಚಿಕನ್ ಬಿರಿಯಾನಿಯ ಬದಲಿಗೆ ಬೀಫ್ ಬಿರಿಯಾನಿ ನೀಡಲಾಗುವುದುಎಂದು ಬರೆಯಲಾಗಿದೆ.

ಈ ನೋಟಿಸ್ ಬಗ್ಗೆ ವಿಶ್ವವಿದ್ಯಾನಿಲಯದಲ್ಲಿ ಗದ್ದಲ ಉಂಟಾದ ನಂತರ, ಎಎಂಯು (AMU) ಆಡಳಿತವು ಅದರಲ್ಲಿ ಟೈಪಿಂಗ್ ದೋಷ ಇದೆ ಎಂದು ಸ್ಪಷ್ಟಪಡಿಸಿತು ಮತ್ತು ಹೊಣೆಗಾರರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಭರವಸೆ ನೀಡಿತು.

ಸರ್ ಶಾ ಸುಲೈಮಾನ್ ಹಾಲ್‌ನ ವಿದ್ಯಾರ್ಥಿಗಳು ಈ ನೋಟಿಸ್ ನ್ನು ಕಂಡುಕೊಂಡ ನಂತರ ವಿವಾದ ಭುಗಿಲೆದ್ದಿತು, ಈ ನೊಟೀಸ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

AMU ಆಡಳಿತ ಇದನ್ನು ಉದ್ದೇಶಪೂರ್ವಕವಲ್ಲದ ತಪ್ಪು ಎಂದು ಕರೆದಿದೆ.ಈ ವಿಷಯವನ್ನು ನಮ್ಮ ಗಮನಕ್ಕೆ ತರಲಾಯಿತು. ನೋಟಿಸ್ ಆಹಾರ ಮೆನುಗೆ ಸಂಬಂಧಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ, ಅದರಲ್ಲಿ ಸ್ಪಷ್ಟವಾದ ಟೈಪಿಂಗ್ ದೋಷವಿದೆ. ನೋಟಿಸ್‌ನಲ್ಲಿ ಯಾವುದೇ ಅಧಿಕೃತ ಸಹಿಗಳಿಲ್ಲದ ಕಾರಣ ಅದನ್ನು ತಕ್ಷಣವೇ ಹಿಂತೆಗೆದುಕೊಳ್ಳಲಾಯಿತು. ನಮ್ಮ ಪ್ರಾಧ್ಯಾಪಕರು (ನೋಟಿಸ್ ನೀಡಿದ್ದಕ್ಕಾಗಿ) ಜವಾಬ್ದಾರರಾಗಿರುವ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಶೋ-ಕಾಸ್ ನೋಟಿಸ್ ನೀಡಿದ್ದಾರೆ. ವಿಶ್ವವಿದ್ಯಾಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ” ಎಂದು ಅವರು ಹೇಳಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!