ಇಂಗ್ಲೆಂಡ್ ಗೆ ಸಾಥ್ ಕೊಟ್ಟ ಡಕೆಟ್, ರೂಟ್: ಭಾರತಕ್ಕೆ 305 ರನ್​ಗಳ ಸವಾಲಿನ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಕಟಕ್​ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡ 50 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 304 ರನ್​ಗಳಿಸಿದೆ.

ಬೆನ್​ ಡಕೆಟ್ (65), ಜೋ ರೂಟ್ (69),ಹ್ಯಾರಿ ಬ್ರೂಕ್ (31), ಜೋಸ್​ ಬಟ್ಲರ್ 34 ರನ್​ಗಳಿಸಿ ತಂಡದ 300ರ ಗಡಿ ದಾಟಲು ನೆರವಾದರು.

ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಹಾಗೂ ಬೆನ್ ಡಕೆಟ್​ ಮೊದಲ ವಿಕೆಟ್​ಗೆ 81 ರನ್​ಗಳ ಜೊತೆಯಾಟ ನೀಡಿದರು. 26 ರನ್​ಗಳಿಸಿದ್ದ ಸಾಲ್ಟ್​ರನ್ನ ಇಂದೇ ಪದಾರ್ಪಣೆ ಮಾಡಿದ ವರುಣ್ ಚಕ್ರವರ್ತಿ ಪೆವಿಲಿಯನ್​ಗಟ್ಟುವ ಮೂಲಕ ಬ್ರೇಕ್ ತಂದುಕೊಟ್ಟರು. ನಂತರ 56 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 56 ರನ್​ಗಳಿಸಿದ್ದ ಡೆಕೆಟ್ ಜಡೇಜಾ ಬೌಲಿಂಗ್​ನಲ್ಲಿ ಪಾಂಡ್ಯಗೆ ಕ್ಯಾಚ್ ನೀಡಿ ಔಟ್ ಆದರು.

3ನೇ ವಿಕೆಟ್​ಗೆ ಜೊತೆಯಾದ ಮಾಜಿ ನಾಯಕ ರೂಟ್ ಹಾಗೂ ಬ್ರೂಕ್​ 66 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಆದರೆ ಬ್ರೂಕ್ 52 ಎಸೆತಗಳಲ್ಲಿ ಕೇವಲ 31 ರನ್​ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ನೀಡಿದರು. ನಂತರ ರೂಟ್ ನಾಯಕ ಬಟ್ಲರ್​ ಜೊತೆಗೂಡಿ 51 ರನ್​ ಸೇರಿಸಿದರು. ಬಟ್ಲರ್ 35 ಎಸೆತಗಳಲ್ಲಿ 34 ರನ್​ ಸಿಡಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ನೀಡಿದರು.

ರೂಟ್ ಔಟಾಗುತ್ತಿದ್ದಂತೆ ಇಂಗ್ಲೆಂಡ್ ತಂಡದ ರನ್​ಗತಿಗೂ ಕಡಿವಾಣ ಬಿದ್ದಿತು. ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಕೊನೆಯ ಓವರ್​ವರೆಗೂ ಕ್ರೀಸ್​ನಲ್ಲಿ ನೆಲೆಯೂರಿ 32 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ 41 ರನ್​ಗಳಿಸಿದರು. ರಶೀಶ್ 5 ಎಸೆತಗಳಲ್ಲಿ 14 ರನ್​ಗಳಿಸಿ ತಂಡದ ಮೊತ್ತ 300ರ ಗಡಿ ದಾಟಲು ಕೊಡುಗೆ ನೀಡಿದರು. ಜೇಮಿ ಓವರ್​ಟನ್ 6, ಆಟ್ಕಿನ್ಸನ್ 3, ಮಾರ್ಕ್​ವುಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಭಾರತದ ಪರ ರವೀಂದ್ರ ಜಡೇಜಾ 10 ಓವರ್​ಗಳಲ್ಲಿ 35 ರನ್​ ನೀಡಿ 3 ವಿಕೆಟ್ ಪಡೆದರೆ, ಪದಾರ್ಪಣೆ ಬೌಲರ್ ಚಕ್ರವರ್ತಿ 54ಕ್ಕೆ1, ಹಾರ್ದಿಕ್ ಪಾಂಡ್ಯ 53ಕ್ಕೆ1, ಹರ್ಷಿತ್ ರಾಣಾ 62ಕ್ಕೆ1, ಮೊಹಮ್ಮದ್ ಶಮಿ 66ಕ್ಕೆ1 ವಿಕೆಟ್ ಪಡೆದು ಮಿಂಚಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!