May 26, 2026
Tuesday, May 26, 2026
spot_img

ಒಂದೇ ಕರೆಯಲ್ಲಿ ಉಲ್ಟಾ ಆಯ್ತು ಎಲ್ಲ ಲೆಕ್ಕಾಚಾರ: ಇರಾನ್ ಆಕ್ರೋಶಕ್ಕೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ 21 ಗಂಟೆಗಳ ಸುದೀರ್ಘ ಸಂಧಾನ ಸಭೆಯು ಅಂತಿಮ ಹಂತದಲ್ಲಿ ವಿಫಲವಾಗಿದೆ. ಇದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಒಂದು ಫೋನ್ ಕರೆ ಕಾರಣ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.

ಸಂಧಾನದ ನಡುವೆಯೇ ನೆತನ್ಯಾಹು ಅವರು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಕರೆ ಮಾಡಿದ್ದು, ಆ ನಂತರ ಅಮೆರಿಕದ ನಿಲುವು ಸಂಪೂರ್ಣ ಕಠಿಣವಾಯಿತು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಇರಾನ್‌ನ ಯುರೇನಿಯಂ ಪುಷ್ಟೀಕರಣ ನಿಲ್ಲಿಸುವುದು ಮತ್ತು ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವ ಅಮೆರಿಕದ ಕಠಿಣ ಷರತ್ತುಗಳನ್ನು ಇರಾನ್ ತಿರಸ್ಕರಿಸಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ. ಕದನ ವಿರಾಮಕ್ಕೆ ಕೇವಲ 9 ದಿನಗಳು ಬಾಕಿ ಇರುವುದರಿಂದ, ಹೊಸ ಒಪ್ಪಂದವಾಗದಿದ್ದರೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿಯುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !