Wednesday, August 10, 2022

Latest Posts

ಎಲ್ಲರ ಚಿತ್ತ ಆಗಸ್ಟ್ 6ರ ಚುನಾವಣೆಯತ್ತ: ಜನರ ಉಪರಾಷ್ಟ್ರಪತಿ ಆಗ್ತಾರಾ ಗದೀಪ್ ಧನ್ಖರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಗೊಂಡಿದ್ದಾರೆ. ಇದರ ಬೆನ್ನಲ್ಲೇ ಉಪರಾಷ್ಟ್ರಪತಿ ಸ್ಥಾನಕ್ಕೂ ಆಗಸ್ಟ್ 6ರಂದು ಚುನಾವಣೆ ನಡೆಯಲಿದ್ದು, ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಖರ್ ಅವರನ್ನು ಬಿಜೆಪಿ ತನ್ನ ಎನ್‌ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಇದಕ್ಕೂ ಮೊದಲು ಈ ಸ್ಥಾನಕ್ಕಾಗಿ ಬಿಜೆಪಿಯ ಹಲವು ಮುಖಂಡರ ಹೆಸರು ಕೇಳಿಬಂದಿತ್ತಾದರೂ, ಕೊನೆಗೆ ಯಾರೂ ಊಹಿಸದ ರೀತಿಯಲ್ಲಿ ಧನ್‌ಕರ್ ಆಯ್ಕೆಯಾಗಿದ್ದು ರೋಚಕ. ಜನರ ರಾಜ್ಯಪಾಲ ಎಂದೇ ಗುರುತಿಸಿಕೊಂಡಿರುವ ಧನ್ಖರ್, ಜನರ ಉಪರಾಷ್ಟ್ರಪತಿ ಆಗುವತ್ತ ಗಮನ ಹರಿಸಿದ್ದು ಬಗೆಗಿನ ಮಾಹಿತಿ ಇಲ್ಲಿದೆ.

ಮಣ್ಣಿನ ಮಗ

ರಾಜಸ್ಥಾನದ ಜುನ್‌ಜುನ್ ಜಿಲ್ಲೆಯ ಕಿಥಾನ ಗ್ರಾಮದ 71 ವರ್ಷದ ಜಗದೀಪ್ ಧನ್ಖರ್ ಜನರ ರಾಜ್ಯಪಾಲ ಎಂದೇ ಗುರುತಿಸಿಕೊಂಡಿರುವ ಮಣ್ಣಿನ ಮಗ. ಅವರ ತಂದೆ, ರೈತರಾಗಿದ್ದವರು. ಹೀಗಾಗಿ ಅವರಿಗೆ ದೇಶದ ಅನ್ನದಾತರ ಸಮಸ್ಯೆಗಳ ಅರಿವಿದೆ. ರೈತರ ಪುತ್ರರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ತನ್ನ ರೈತ ಪರ ನಿಲುವಿನ ಬಗ್ಗೆ ಸಂದೇಶ ರವಾನಿಸಿದೆ. ರೈತರ ಪರ ಅಪಾರ ಕಾಳಜಿ ಹೊಂದಿರುವ ಧನ್ಖರ್ ಅವರನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರೈತನ ಪುತ್ರ ಎಂದು ಶ್ಲಾಘಿಸಿದ್ದಾರೆ. ಗ್ರಾಮೀಣ ಭಾಗದವರಾದ ಧನ್‌ಕರ್ ಅವರಿಗೆ ಈಗಾಗಲೇ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದು ಸಾಕಷ್ಟು ರಾಜಕೀಯ ಅನು ಭವವನ್ನೂ ಹೊಂದಿದ್ದಾರೆ.

ಹಿರಿಯ ವಕೀಲ, ಅನುಭವಿ ರಾಜಕಾರಣಿ

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನ್ಖರ್ ಅಪಾರ ಕಾನೂನು ಮತ್ತು ಶಾಸಕಾಂಗ ಅನುಭವ ಹೊಂದಿದ್ದಾರೆ. ಹಿರಿಯ ವಕೀಲರಾಗಿದ್ದ ಅವರು, ಸುಪ್ರೀಂ ಕೋರ್ಟ್ ಮತ್ತು ರಾಜಸ್ಥಾನ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. 1989 ರಲ್ಲಿ ಜುಂಜುನು ಸಂಸದೀಯ ಕ್ಷೇತ್ರದಿಂದ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ. 1993 ಮತ್ತು 1998ರ ನಡುವಿನ ಅವಧಿಯಲ್ಲಿ ಅಜ್ಮೇರ್ ಜಿಲ್ಲೆಯಲ್ಲಿನ ಕಿಶನ್‌ಗಢ ಕ್ಷೇತ್ರದಿಂದ ಧನ್‌ಕರ್ ಅವರು ರಾಜಸ್ಥಾನ ವಿಧಾನಸಭೆಗೂ ಆಯ್ಕೆಯಾಗಿದ್ದರು. ಲೋಕಸಭೆ ಮತ್ತು ರಾಜಸ್ಥಾನ ವಿಧಾನಸಭೆ ಎರಡರಲ್ಲೂ ಅವರು ಪ್ರಮುಖ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss