ಡೋಕ್ಲಾಮ್‌ನ ‘ಚೀನಾ ಗ್ರಾಮ’ದ ಮೇಲೆ ಕ್ಷಣಕ್ಷಣಕ್ಕೂ ಹದ್ದಿನ ಕಣ್ಣಿರಿಸಿದೆ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಎಲ್ಲ ಬೆಳವಣಿಗೆಗಳ ಮೇಲೂ ನಿಗಾ ಇರಿಸಿರುವುದಾಗಿ ಭಾರತ ತಿಳಿಸಿದ್ದು, ಡೋಕ್ಲಾಮ್‌ನಲ್ಲಿ ಚೀನಾ ಗ್ರಾಮ ನಿರ್ಮಾಣ ಮಾಡಿರುವುದನ್ನು ತೀಕ್ಷ್ಣವಾಗಿ ಖಂಡಿಸಿದೆ. 2017ರಲ್ಲಿ ಭಾರತ ಮತ್ತು ಚೀನಾ ನಡುವೆ ಡೋಕ್ಲಾಮ್‌ನಲ್ಲಿ ಬಿಕ್ಕಟ್ಟು ಏರ್ಪಟ್ಟಿತ್ತು. ಅದಾದ ಬಳಿಕ ಈಗ ಚೀನಾ ಅದೇ ಪ್ರದೇಶದಲ್ಲಿ ಗ್ರಾಮ ನಿರ್ಮಿಸುತ್ತಿದ್ದು, ಉಪಗ್ರಹ ಚಿತ್ರದಿಂದ ಇದು ಬಹಿರಂಗ ಗೊಂಡಿರುವ ಹಿನ್ನೆಲೆ ಭಾರತ ತನ್ನ ನಿಲುವನ್ನು ವ್ಯಕ್ತಪಡಿಸಿದೆ.

ಭಾರತದ ಭದ್ರತೆಗೆ ಧಕ್ಕೆಯಾಗುವ ಎಲ್ಲ ಬೆಳವಣಿಗೆಗಳನ್ನು ಸರ್ಕಾರ ನಿರಂತರವಾಗಿ ಗಮನಿಸುತ್ತಿದ್ದೆ. ಅದೇ ರೀತಿ ರಾಷ್ಟ್ರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಸಹ ಕೈಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!