ನೇಪಾಳದಲ್ಲಿ ಆದಿಪುರುಷ್ ಬಿಟ್ಟು ಇನ್ನೆಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ಆದಿಪುರುಷ್ ಹೊರತುಪಡಿಸಿ ಇನ್ನೆಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನ ಪುನರಾರಂಭವಾಗುತ್ತಿದೆ.

ಆದಿಪುರುಷ್ ಸಿನಿಮಾದಲ್ಲಿ ಸೀತಾದೇವಿಯು ಭಾರತದ ಮಗಳು ಎನ್ನುವ ಡೈಲಾಗ್ ಇರುವ ಕಾರಣದಿಂದ ನೇಪಾಳದಲ್ಲಿ ಈ ಸಿನಿಮಾ ಬ್ಯಾನ್ ಆಗಿದೆ, ಇಷ್ಟೇ ಅಲ್ಲದೆ ಒಟ್ಟಾರೆ ಎಲ್ಲ ಹಿಂದಿ ಸಿನಿಮಾಗಳ ಮೇಲೆ ಸರ್ಕಾರ ನಿಷೇಧ ಹೇರಿತ್ತು. ಆದರೆ ಇದೀಗ ಹಿಂದಿಯ ಬೇರೆ ಸಿನಿಮಾಗಳ ಮೇಲಿದ್ದ ನಿಷೇಧ ಹಿಂಪಡೆಯಲಾಗಿದೆ.

ಸದ್ಯಕ್ಕೆ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಝರಾ ಹಟ್ಕೆ, ಝರಾ ಬಚ್ಕೆ ಸಿನಿಮಾ ಪ್ರದರ್ಶನವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!