July 8, 2026
Wednesday, July 8, 2026
spot_img

76 ರನ್‌ಗೆ ಆಲೌಟ್: ಇಂಗ್ಲೆಂಡ್ ವೇಗಿಗಳ ಅಬ್ಬರಕ್ಕೆ ಧೂಳೀಪಟವಾಯ್ತು ಭಾರತದ ಬ್ಯಾಟಿಂಗ್ ಕೋಟೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜುಲೈ 7, 2026 ರಂದು ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅತ್ಯಂತ ನಿರಾಸೆ ಮೂಡಿಸಿದೆ. ಬರೋಬ್ಬರಿ 125 ರನ್‌ಗಳ ಬೃಹತ್ ಅಂತರದಿಂದ ಪರಾಜಯಗೊಳ್ಳುವ ಮೂಲಕ, ರನ್‌ಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ತನ್ನ ಚುಟುಕು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಹಿ ಸೋಲನ್ನು ಉಂಡಿದೆ.

ಇಂಗ್ಲೆಂಡ್ ಬ್ಯಾಟರ್‌ಗಳ ರನ್ ಬೇಟೆ

ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ, ಈ ತೀರ್ಮಾನವನ್ನು ಸುಳ್ಳಾಗಿಸಿದ ಆತಿಥೇಯ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅಂತಿಮವಾಗಿ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 201 ರನ್‌ಗಳ ಮೊತ್ತವನ್ನು ಪೇರಿಸಿತು.

ಬ್ಯಾಟಿಂಗ್ ಪೆವಿಲಿಯನ್ ಪೆರೇಡ್

202 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಯಿತು. ಇಂಗ್ಲೆಂಡ್ ವೇಗಿಗಳ ನಿಖರ ಹಾಗೂ ಮಾರಕ ದಾಳಿಗೆ ಉತ್ತರಿಸಲಾಗದೆ ಹಿರಿಯ ಮತ್ತು ಯುವ ಆಟಗಾರರಿಬ್ಬರೂ ಕ್ರೀಸ್ ಕಚ್ಚಿ ನಿಲ್ಲಲು ವಿಫಲರಾದರು. ಕೇವಲ 76 ರನ್‌ಗಳಿಗೆ ಸರ್ವಪತನ ಕಂಡ ಭಾರತ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ತನ್ನ ಎರಡನೇ ಅತ್ಯಂತ ಕನಿಷ್ಠ ಮೊತ್ತವನ್ನು ದಾಖಲಿಸಿ ತೀವ್ರ ಮುಖಭಂಗ ಅನುಭವಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !