ಮೇಕೆದಾಟು ಯೋಜನೆ: ಎಲ್ಲಾ ಪಕ್ಷದವರು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಿದೆ- ಮಾಜಿ ಸಿಎಂ ಜಗದೀಶ್‌ ಶೆಟ್ಟರ್

ಹೊಸದಿಗಂತ ವರದಿ, ಹುಬ್ಬಳ್ಳಿ:

ಮೇಕೆದಾಟು ವಿಚಾರದಲ್ಲಿ ಕಾನೂನಿನ ತೊಡಕುಗಳಿದ್ದು, ಎಲ್ಲಾ ಪಕ್ಷದವರು ಕುಳಿತು ಸರ್ವಸಮತ ನಿರ್ಧಾರದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲುಬೇಕು. ಆದರೆ ವಿರೋಧ ಪಕ್ಷದವರು ಪಾದಯಾತ್ರೆ ಮತ್ತೊಂದು ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೇಶ ಶೆಟ್ಟರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಈ ವಿಚಾರದಲ್ಲಿ ರಾಜಕಾರಣ ಮಾಡಿದರೆ ಬೇರೆ ರಾಜ್ಯದವರು ಇದರ ದುರುಪಯೋಗ ಪಡಿಸಿ
ಕೊಳ್ಳುತ್ತಾರೆ. ಮೇಕೆದಾಟು ಯೋಜನೆ ರಾಜ್ಯದ ಹಕ್ಕಾಗಿದ್ದು, ಎಲ್ಲ ಪಕ್ಷದವರ ಸಹಕಾದಿಂದ ಸಮಸ್ಯೆ ನಿವಾರಿಸಿ ಅನುಷ್ಠಾನ ಮಾಡವಂತಾಗಬೇಕು ಹೊರತು ರಾಜಕಾರಣ ಬೇಡ ಎಂದರು.
ಆರು ವರ್ಷ ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವುಕುಮಾರ ಯಾಕೆ ಸುಮ್ಮನಿದ್ದರು. ಈಗ ವಿರೋಧ ಪಕ್ಷಕ್ಕೆ ಬಂದ ಮೇಲೆ ಪಾದಯಾತ್ರೆ ಮತ್ತೊಂದು ನೆಪವಾಯಿತೆ ಎಂದು ಪ್ರಶ್ನಿಸಿದರು. ಪಾದಯಾತ್ರೆ ಮಾಡುವ ಮೂಲಕ ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರೆ. ಸಾರ್ವಜನಿಕ ವಿಚಾರದಲ್ಲಿ ಈ ರೀತಿ ರಾಜಕೀಯ ಮಾಡುತ್ತಿರುವುದು ಸಲ್ಲ ಎಂದರು.
ಮಹದಾಯಿ ವಿಚಾರದಲ್ಲಿ ಸಾಕಷ್ಟು ಹೋರಾಟಗಳಾದವು. ಪ್ರಧಾನಿಯವರ ಮಧ್ಯಪ್ರವೇಶ ಆಯ್ತು ಆದರೆ ಕೊನೆಗೆ ಕಾನೂನಾತ್ಮಕ ನಿರ್ಣಯಗಳನ್ನು ಪಾಲಿಸಬೇಕಾಯಿತು. ಅದೇ ರೀತಿ ಮೇಕೆದಾಟು ವಿಚಾರದಲ್ಲಿ ಕಾನೂನು ಚೌಕಟ್ಟಿನಲ್ಲಿ ಏನಾಗಬೇಕು ಅದು ಆಗುತ್ತದೆ. ಅದಕ್ಕಾಗಿ ಸರ್ಕಾಕ್ಕೆ ಏನು ಕ್ರಮ ಕೈಗೊಳ್ಳಬೇಕು ಅದಕ್ಕೆ ವಿರೋಧ ಪಕ್ಷದವರ ಸಹಕಾರ ನಿಡಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!