ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಪಕಿ ಏಕ್ತಾ ಕಪೂರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೊಸ ವರ್ಷದ ನಂತರ ಬಾಲಿವುಡ್‌ಗೆ ಕೊರೋನಾ ಹೆಚ್ಚೇ ಬಾಧಿಸುತ್ತಿದ್ದು, ಇದೀಗ ನಿರ್ಮಾಪಕಿ ಏಕ್ತಾ ಕಪೂರ್‌ಗೂ ಸೋಂಕು ತಗುಲಿದೆ.
ನಾನು ಎಲ್ಲಿಯೂ ಹೋಗಿಲ್ಲ, ಎಲ್ಲ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆ. ಆದರೂ ನನಗೆ ಸೋಂಕು ತಗುಲಿದೆ. ನಾನು ಆರೋಗ್ಯವಾಗಿದ್ದೇನೆ. ಯಾವುದೇ ಲಕ್ಷಣಗಳಿಲ್ಲ. ನಾನು ಕ್ವಾರೆಂಟೀನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿ ಎಂದಿದ್ದಾರೆ.