SHOCKING | H3N2 ವೈರಸ್ ಹೆಚ್ಚಳ: ಪುದುಚೇರಿಯಲ್ಲಿ ಶಾಲೆಗಳು ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಎಚ್3ಎನ್2 ವೈರಸ್‌ ಹರಡುವ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿ 1 ರಿಂದ 8 ನೇ ತರಗತಿಯ ಎಲ್ಲಾ ಶಾಲೆಗಳನ್ನು ನಾಳೆಯಿಂದ 10 ದಿನಗಳವರೆಗೆ ಮುಚ್ಚಲಾಗುತ್ತದೆ ಎಂದು ಪುದುಚೇರಿ ಶಿಕ್ಷಣ ಸಚಿವ ಎ ನಮಸ್ಶಿವಾಯಂ ಹೇಳಿದ್ದಾರೆ.

ಪುದುಚೇರಿಯಲ್ಲಿ ಇದುವರೆಗೆ ಎಚ್3ಎನ್2 ವೈರಸ್‌ಗೆ ಸಂಬಂಧಿಸಿದ 79 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದರು. ಆದರೆ ಎಚ್3ಎನ್2ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದನ್ನು ಕೂಡ ಹೇಳಿದ್ದರು.

ಎಚ್3ಎನ್2 ವೈರಸ್ ಹರಡುವ ಹಿನ್ನೆಲೆಯಲ್ಲಿ ಪುದುಚೇರಿಯ ಎಲ್ಲಾ ಶಾಲೆಗಳನ್ನು ಮಾರ್ಚ್ 16 ರಿಂದ 26 ರವರೆಗೆ ಮುಚ್ಚಲಾಗುವುದು ಎಂದು ಶಿಕ್ಷಣ ಸಚಿರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸರ್ಕಾರಿ ಅನುದಾನಿತ ಮತ್ತು ಖಾಸಗಿ ಆಡಳಿತದ ಅಡಿಯಲ್ಲಿ ಬರುವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:30 ರವರೆಗೆ ಅರ್ಧ ದಿನದ ಶಾಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನದ ಊಟವನ್ನು ಒದಗಿಸಬೇಕು. ಆದಲ್ಲದೆ ಎಸ್‌ಎಸ್‌ಸಿ ಪಬ್ಲಿಕ್ ಪರೀಕ್ಷೆಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ವಿಶೇಷ ತರಗತಿಗಳು ಮುಂದುವರಿಯುತ್ತವೆ. ಎಸ್‌ಎಸ್‌ಸಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಶಾಲೆಗಳು ಮಧ್ಯಾಹ್ನ 1.00 ರಿಂದ ಸಂಜೆ 5.00 ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!