October 11, 2026
Sunday, October 11, 2026
spot_img

ದುಡಿದ ದುಡ್ಡೆಲ್ಲಾ ಐಪಿಎಲ್‌ ಬೆಟ್ಟಿಂಗ್‌ನಲ್ಲೇ ಕಳೆದು ಹೋಯ್ತು! ಡ್ಯಾಂಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದುಡಿದ ದುಡ್ಡನ್ನೆಲ್ಲಾ ಐಪಿಎಲ್‌ ಬೆಟ್ಟಿಂಗ್‌ ಮೇಲೆ ಹಾಕಿದ ವ್ಯಕ್ತಿಯೊಬ್ಬರು ಸೋಲಿನ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಲಬುರಗಿಯ ನಾಗೂರ ಸೇತುವೆ ಬಳಿಯ ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಗಿ ತಾಲೂಕಿನ ರುಮ್ಮನಗೂಡ್‌ ನಿವಾಸಿ ಚಂದ್ರಕಾಂತ ದೇಸಾಯಿ ಮೃತರು.

ಈತ ದಿನಾಲೂ ಐಪಿಎಲ್ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಲ್ಲದೇ ಹಲವರ ಬಳಿ ಸಾಲ ಮಾಡಿದ್ದ. ಸಾಲಗಾರರ ಕಿರುಕುಳ ತಾಳದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ನಾಗೂರ ಸೇತುವೆವರೆಗೂ ಬೈಕ್‌ನಲ್ಲಿ ತೆರಳಿ ಅಲ್ಲಿ ಫೋನ್‌ ಹಾಗೂ ಬೈಕ್‌ನ್ನು ಬಿಟ್ಟು ಸೇತುವೆಯಿಂದ ಹಾರಿದ್ದಾರೆ.

Must Read