ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಮೆಟ್ರೋ ಸೇವೆ ಲಭ್ಯವಿದ್ದರೂ ಜನ ಎಲ್ಲಿಗೂ ತೆರಳುತ್ತಿಲ್ಲ. ಬಂದ್ ಬಿಸಿ ಪ್ರವಾಸೋದ್ಯಮಕ್ಕೂ ತಟ್ಟಿದ್ದು, ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.
ಸಾಮಾನ್ಯವಾಗಿ ವೀಕೆಂಡ್ ಆರಂಭವಾಗುತ್ತಿದ್ದಂತೆಯೇ ಮೈಸೂರಿನಲ್ಲಿ ಜನಜಂಗುಳಿ ಇರುತ್ತಿತ್ತು. ಆದರೆ ಇಂದು ಪ್ರವಾಸಿಗರಿಲ್ಲದೆ ಮೈಸೂರು ಅರಮನೆ ಬಣಗುಡುತ್ತಿದೆ. ಇನ್ನು ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಕೂಡ ಪ್ರವಾಸಿಗರಿಲ್ಲದೆ ಖಾಲಿ ಖಾಲಿ ಎನಿಸುತ್ತಿದೆ. ಒಟ್ಟಾರೆ ಬಂದ್ ಬಿಸಿ ಪ್ರವಾಸಿ ತಾಣಗಳಿಗೂ ತಟ್ಟಿದೆ ಅನ್ನೋದಂತು ನಿಜ!