5ಜಿ ವಿಸ್ತರಿಸುತ್ತಿದ್ದಂತೆ ತೆರೆದುಕೊಳ್ಳಲಿವೆ ಈ ಎಲ್ಲ ಉದ್ಯೋಗವಕಾಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಧಾನಿ ನರೇಂದ್ರ ಮೋದಿ ಅವರು ಅ.1ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ 2022) ನಲ್ಲಿ 5ಜಿ ಇಂಟರ್ನೆಟ್ ಸೇವೆಗಳಿಗೆ ಚಾಲನೆ ನೀಡಿದ್ದರು. ಈ ಮೂಲಕ ಭಾರತದಲ್ಲಿ ಇಂಟರ್‌ ನೆಟ್‌ ಮಹಾಕ್ರಾಂತಿಗೆ ನಾಂದಿ ಹಾಡಲಾಗಿದೆ. 5 ಜಿ ಸೇವೆ ವಿಸ್ತರಿಸುತ್ತಿದ್ದಂತೆ ಭಾರತದಲ್ಲಿ ಹಲವಾರು ಉದ್ಯೋಗವಕಾಶಗಳು ತರೆದುಕೊಳ್ಳಲಿವೆ.

5 ಜಿ ಯಿಂದ ಭಾರತದಲ್ಲಿ ವಿಫುಲ ಉದ್ಯೋಗವಕಾಶ ಸೃಷ್ಟಿ:
ಸಾಕಷ್ಟು ಪೂರ್ವಸಿದ್ಧತೆಗಳನ್ನು ನಡೆಸಿದ ಬಳಿಕವೇ ಭಾರತ 5 ಜಿ ಯುಗಕ್ಕೆ ಕಾಲಿಟ್ಟಿದೆ. 4 ಜಿ ಗೆ ಹೋಲಿಸಿದರೆ 5 ಜಿ ಯಲ್ಲಿ ಇಂಟರ್‌ ನೆಟ್‌ ವೇಗ ಹತ್ತು ಪಟ್ಟು ಹೆಚ್ಚಾಗಲಿದ್ದು, ಇದರಿಂದ ಬಳಕೆದಾರರು ಹಲವು ತಂತ್ರಜ್ಞಾನಗಳ ಅನುಕೂಲ ಪಡೆಯಬಹುದಾಗಿದೆ. ಜೊತೆಗೆ ಉದ್ಯೋಗಾವಕಾಶಗಳ ಮಹಾಪೂರವೇ ಹರಿದುಬರಲಿದೆ. ಅದರಲ್ಲೂ ಪ್ರಮುಖವಾಗಿ ಬಾಹ್ಯಾಕಾಶ ಆಧಾರಿತ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿದೆ. 5G ಟೆಕ್ ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಟೆಲಿಕಾಂ ಕ್ಷೇತ್ರವು ಮಣೆ ಹಾಕುತ್ತಿದೆ. ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರ, ತಂತ್ರಜ್ಞಾನ ವಲಯ, ನೂತನ ಸ್ಟಾರ್ಟ್‌ಅಪ್‌ಗಳು ಮತ್ತು ಆಟೋಮೋಟಿವ್ ವಲಯದಲ್ಲಿ ಪರಿಣಿತ ಪ್ರತಿಭಾವಂತರಿಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ.
ರೇಡಿಯೋ ಫ್ರೀಕ್ವೆನ್ಸಿ (RF), ಸಿಸ್ಟಮ್ಸ್ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್‌ಗಳು, AI/ML ಡೆವಲಪರ್‌ಗಳು, 5G ORAN (ಓಪನ್ ರೇಡಿಯೋ ಆಕ್ಸೆಸ್ ನೆಟ್‌ವರ್ಕ್) ಆರ್ಕಿಟೆಕ್ಚರ್ ತಜ್ಞರು ಮತ್ತು ಬಳಕೆದಾರರ ಅನುಭವ ವಿನ್ಯಾಸ ಮತ್ತು ತಂತ್ರಜ್ಞಾನ ಪರೀಕ್ಷಾ ವಿಭಾಗಗಳ ತಂತ್ರಜ್ಞರು 5ಜಿ ಸೇವೆ ಪರಿಚಯಿಸುತ್ತಿದ್ದಂತೆ ಹೆಚ್ಚಿನ  ಬೇಡಿಕೆಯಲ್ಲಿದ್ದಾರೆ. ಜಾಗತಿಕವಾಗಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಈಗಾಗಲೇ ಕೆಲಸ ಮಾಡಿರುವ ಭಾರತೀಯ ಮೂಲದ ತಂತ್ರಜ್ಞರಿಗೆ ಭಾರತದ ಟೆಲಿಕಾಂ ಉದ್ದಿಮೆಗಳು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿವೆ.
ಅಂದಾಜಿನ ಪ್ರಕಾರ, 2021–2022 ರ ಸಾಲಿನಲ್ಲಿ 5G ಮತ್ತು ಸಂಬಂಧಿತ ತಂತ್ರಜ್ಞಾನಗಳಿಗಾಗಿ ಭಾರತದಲ್ಲಿ ಸುಮಾರು 36,000 ಕ್ಕೂ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ. 5ಜಿ ಸೇವೆ ವಿಸ್ತರಣೆಯಾಗುತ್ತ ಸಾಗಿದಂತೆ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!