ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಾರ್ ನಿಮ್ಮನ್ನು ನೋಡೋಕೆ ದಿನಕ್ಕೆ ನೂರ್ ಜನ ಬರ‍್ತಾರೆ, ಎಲ್ಲಾರೂ ಅಡ್ಡಾದಿಡ್ಡಿಯಾಗಿ ನಮ್ಮನೆ ಮುಂದೆ ಕಾರ್ ನಿಲ್ಸಿ ಹೋಗ್ತಾರೆ, ನಮ್ಮನೆ ಗಾಡಿ ಹೊರಗೆ ತೆಗೆಯೋದು ಹೇಗೆ? ಎಂದು ನೆರೆಮನೆಯ ವ್ಯಕ್ತಿಯೊಬ್ಬರು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.
ನಮ್ಮ ಮನೆಯ ತನಕವೂ ಬ್ಯಾರಿಕೇಡ್ ಇದೆ, ನಾವು ಓಡಾಡೋದು ಹೇಗೆ? ಸರಿಯಾಗೂ ಪಾರ್ಕಿಂಗ್ ಮಾಡೋದಿಲ್ಲ, ಅಡ್ಡಾದಿಡ್ಡಿ ನಿಲ್ಲಿಸಿ ಹೋಗ್ತಾರೆ, ನಾವು ನಮ್ಮ ಗಾಡಿ ಹೊರತೆಗೆಯದೇ ನಡ್ಕೊಂಡು ಓಡಾಡ್ತಿದ್ದೇವೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದೇವೆ, ಆದರೂ ಉಪಯೋಗ ಆಗಿಲ್ಲ ಎಂದು ಸಿಎಂ ಕಾರ್‌ಗೆ ಅಡ್ಡಗಟ್ಟಿ ನಿಂತು ದೂರು ನೀಡಿದ್ದಾರೆ.
ಈ ಮಾತನ್ನು ಆಲಿಸಿದ ಸಿದ್ದರಾಮಯ್ಯ ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿ ತೆರಳಿದ್ದಾರೆ.