ಬೀದಿಯಲ್ಲಿ ಎಳೆದಾಡಿದಾಗ ಆ ಪಕ್ಷ ಹೊರತುಪಡಿಸಿ ಎಲ್ಲರು ನಮ್ಮ ಜೊತೆಗಿದ್ದರು: ವಿನೇಶ್​ ಫೋಗೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್; 

ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮ ಜೊತೆಗಿದ್ದವು ಎಂದು ಕುಸ್ತಿಪಟು ವಿನೇಶ್​ ಫೋಗೇಟ್ ಹೇಳಿದ್ದಾರೆ.

ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ ಹಾಗೂ ವಿನೇಶ್‌ ಫೋಗಟ್‌ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ಯಾರು ಇರುತ್ತಾರೆ ಎಂಬುದು ಅರಿವಾಗುತ್ತದೆ. ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ, ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮ ಜೊತೆಗಿದ್ದವು. ಅಂತಹ ಸಮಯದಲ್ಲಿ ನಮ್ಮ ಜೊತೆಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷ ಸೇರಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ಮಹಿಳೆಯರೊಂದಿಗೆ ನಿಂತಿರುವ ಮತ್ತು ಹಳ್ಳಿಯಿಂದ ದಿಲ್ಲಿಯವರಿಗೆ ಹೋರಾಡಲು ಸಿದ್ಧವಾಗಿರುವ ಪಕ್ಷ ಎಂದು ಅವರು ಬಣ್ಣಿಸಿದರು.

ಪ್ರತಿಭಟನೆ ವೇಳೆ ಬಿಜೆಪಿ ಐಟಿ ಸೆಲ್ ನಮ್ಮ ವಿರುದ್ಧ ಅಪಪ್ರಚಾರ ಮಾಡಿತ್ತು. ಆಗಲೇ ನಾವು ಕುಸ್ತಿಯಿಂದ ದೂರ ಸರಿಯಬೇಕಿತ್ತು. ನಾವು ರಾಜಕೀಯ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು, ರಾಷ್ಟ್ರೀಯ ಮಟ್ಟದಲ್ಲಿ ಆಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ನಾನು ಆಡಿದೆ. ಟ್ರಯಲ್ಸ್​ನಲ್ಲಿ ಆಡಲು ನನಗೆ ಇಷ್ಟವಿಲ್ಲ ಎಂದಿದ್ದರು. ನಾನು ಭಾಗವಹಿಸಿದೆ. ನಾನು ಒಲಿಂಪಿಕ್ಸ್‌ಗೆ ಹೋಗುವುದಿಲ್ಲ ಎಂದು ಹೇಳಿದರು, ಆದರೆ ನಾನು ಹೋಗಿ ಫೈನಲ್‌ಗೆ ತಲುಪಿದೆ ಎಂದು ವಿನೇಶ್ ಆಕ್ರೋಶ ವ್ಯಕ್ತಪಡಿಸಿದರು.

ಪುನಿಯಾ ಮಾತನಾಡಿ, ನನ್ನ ದೇಶದ ಜನರ ಸೇವೆ ಮಾಡುವ ಅವಕಾಶವನ್ನು ದೇವರು ನನಗೆ ನೀಡಿದ್ದಾರೆ. ಇದಕ್ಕಿಂತ ಆರ್ಶೀವಾದದ ಕೆಲಸ ಇರಲಾರದು ಎಂದು ನಾನು ನಂಬುತ್ತೇನೆ. ಈ ಹೊಸ ಆರಂಭದ ಬಗ್ಗೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ನಾವು ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರವನ್ನು ಬಲಪಡಿಸಲು ಶ್ರಮಿಸುತ್ತೇವೆ. ವಿನೇಶ್ ಫೈನಲ್‌ಗೆ ಅರ್ಹತೆ ಪಡೆದ ದಿನ ದೇಶಕ್ಕೆ ದೇಶವೇ ಖುಷಿ ಪಟ್ಟಿತ್ತು, ಆದರೆ ಮರುದಿನ ಎಲ್ಲರೂ ದುಃಖಿತರಾಗಿದ್ದರು. ಆ ಸಮಯದಲ್ಲಿ ಒಂದು ಐಟಿ ಸೆಲ್ ಸಂಭ್ರಮಿಸುತ್ತಿತ್ತು ಎಂದು ಹೇಳಿದ್ದಾರೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!