Wednesday, December 6, 2023

Latest Posts

ಖಾರ ಖಾರವಾಗಿ ಶುಂಠಿ, ಹಸಿಮೆಣಸಿನಕಾಯಿ ಚಟ್ನಿ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

3 ಶುಂಠಿ
7-8  ಹಸಿ ಮೆಣಸಿನಕಾಯಿ
3 ಟೀಸ್ಪೂನ್ ಉದ್ದಿನ ಬೇಳೆ 3 ಚಮಚ ತುರಿದ ಬೆಲ್ಲ
1 ಟೀಸ್ಪೂನ್ ಜೀರಿಗೆ ಬೀಜ
20 ಗ್ರಾಂ ಹುಣಸೆಹಣ್ಣು
ಉಪ್ಪು
ಅರಿಶಿನ ಪುಡಿ

ಮಾಡುವ ವಿಧಾನ: 

ಮೊದಲಿಗೆ ಪ್ಯಾನ್‌ ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಅದಕ್ಕೆ ಶುಂಠಿ ಪೀಸ್‌ ಮಾಡಿ ಹಾಕಿ ಐದು ನಿಮಿಷ ಹುರಿಯಿರಿ ಅದಕ್ಕೇ ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದ ಬಳಿಕ ಹಸಿ ಮೆಣಸಿನ ಕಾಯಿ ಎರಡು ತುಂಡು ಮಾಡಿ ಹಾಕಿ ಬಾಡಿಸಿ. ನಂತರ ತಣಿದ ಮೇಲೆ ಮಿಕ್ಸಿ ಜಾರಿಗೆ ಇದೆಲ್ಲವನ್ನು ಹಾಕಿ, ಅದರೊಳಕ್ಕೆ ಜೀರಿಗೆ, ಬೆಲ್ಲ, ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಹಾಕಿ ಮಿಕ್ಸಿ ಮಾಡಿ. ಒಗ್ಗರಣೆ ಮಾಡುವುದಾರೆ ಮಾಡಬಹುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಈ ಚಟ್ನಿ ಬಿಸಿ ಅನ್ನ, ಚಪಾತಿ, ಇಡ್ಲಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!