ಗಂಭೀರ್ ವಿರುದ್ಧ ಆರೋಪ: ಬೌಲರ್ ಶ್ರೀಶಾಂತ್ ಗೆ ಲೀಗಲ್ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹಾಗೂ ವೇಗದ ಬೌಲರ್ ಶ್ರೀಶಾಂತ್ (Sreesanth) ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ ಜಾರಿಯಾಗಿದೆ.

ಗೌತಮ್ ಗಂಭೀರ್ ತನ್ನನ್ನು ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು. ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ.

ಟಿ20 ಟೂರ್ನಿಯಲ್ಲಿ ಆಡುವ ವೇಳೆ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶ್ರೀಶಾಂತ್ ತಪ್ಪಿತಸ್ಥರು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. ಆಟಗಾರನನ್ನು ಟೀಕಿಸುವ ವೀಡಿಯೊಗಳನ್ನು ತೆಗೆದುಹಾಕಿದರೆ ಮಾತ್ರ ಅವರೊಂದಿಗೆ ಮಾತುಕತೆ ಮಾಡಲಾಗುವುದು ಎಂದು ಹೇಳಲಾಗಿದೆ.

ಇಬ್ಬರ ಗಲಾಟೆ ವಿಚಾರವಾಗಿ ಅಂಪೈರ್‌ಗಳು ತಮ್ಮ ವರದಿಯನ್ನು ಕಳಿಸಿದ್ದು, ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಕರೆದ ಬಗ್ಗೆ ಅದರಲ್ಲಿ ಮಾಹಿತಿ ಇಲ್ಲ. ಶ್ರೀಶಾಂತ್ ಅವರು ಒಂದೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಇಬ್ಬರ ಜಗಳ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!