ಅಕ್ರಮವಾಗಿ ಮಗು ದತ್ತು ಪಡೆದ ಆರೋಪ: ಮೌನ ಮುರಿದ ಸೋನು ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪದಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸೋನು ಗೌಡ (Sonu Gowda) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪೊಲೀಸ್​ ವಾಹನದಲ್ಲಿ ತೆರಳುವುದಕ್ಕೂ ಮುನ್ನ ಮಾಧ್ಯಮಗಳ ಎದುರು ಸೋನು ಶ್ರೀನಿವಾಸ್​ ಗೌಡ ಹೇಳಿಕೆ ನೀಡಿದ್ದಾರೆ. ‘ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಏನೂ ತೊಂದರೆ ಇಲ್ಲ. ಒಂದು ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ನಾನು ಕರೆದುಕೊಂಡ ಬಂದಿದ್ದು. ಅವಳು ಈಗಲೂ ಆರಾಮಾಗಿ, ಸುರಕ್ಷಿತವಾಗಿ ಇದ್ದಾಳೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!