ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಭೂ ಒತ್ತುವರಿ ಆರೋಪದ ಮೇಲೆ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ವಿರುದ್ಧ ಹೈದರಾಬಾದ್ ನ ಮಾಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜನಮ್ ಕೋಸಮ್ ಮಾನಸಾಕ್ಷಿ ಫೌಂಡೇಶನ್ ಎಂಬ ಎನ್ಜಿಒ ಅಧ್ಯಕ್ಷ ಕಾಶಿರೆಡ್ಡಿ ಭಾಸ್ಕರ ರೆಡ್ಡಿ ಅವರು ದೂರು ದಾಖಲಿಸಿದ್ದಾರೆ.
ಆಗಸ್ಟ್ನಲ್ಲಿ ನೆಲಸಮಗೊಂಡ ಎನ್ ಕನ್ವೆನ್ಷನ್ ಸೆಂಟರ್ ಅನ್ನು ನಾಗಾರ್ಜುನ ನೂರಾರು ಕೋಟಿ ಮೌಲ್ಯದ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ. ವಿವಾದಿತ ಭೂಮಿ ತಮ್ಮಿಡಿಕುಂಟಾ ಸರೋವರದ ಪೂರ್ಣ ಟ್ಯಾಂಕ್ ಮಟ್ಟ (ಎಫ್ಟಿಎಲ್) ಮತ್ತು ಬಫರ್ ವಲಯದೊಳಗೆ ಬರುತ್ತದೆ ಎಂದು ವರದಿಯಾಗಿದೆ.
ದೂರಿಗೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.