ಮಾವೋವಾದಿ ನಕ್ಸಲ್‌ ಚಟುವಟಿಕೆ ಆರೋಪ: ಇಬ್ಬರ ವಿರುದ್ಧ ಕೇರಳದಲ್ಲಿ ಚಾರ್ಜ್‌ ಶೀಟ್‌ ಸಲ್ಲಿಸಿದ ಎನ್‌ಐಎ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐ (ಮಾವೋವಾದಿ)ಗೆ ಯುವಕರನ್ನು ನೇಮಕ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಕೇರಳದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಎರ್ನಾಕುಲಂನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಇಬ್ಬರು ಆರೋಪಿಗಳನ್ನು ಹೆಸರಿಸಲಾಗಿದೆ. ಆರೋಪಿಗಳನ್ನು ಆಂಧ್ರಪ್ರದೇಶ ನಿವಾಸಿಗಳಾದ ಕಂಬಂಪತಿ ಚೈತನ್ಯ ಅಲಿಯಾಸ್ ಚೈತನ್ಯ/ಸೂರ್ಯ ಮತ್ತು ವಳಗುತ ಆಂಜನೇಲು ಅಲಿಯಾಸ್ ವಿ ಆಂಜಿನೇಯುಲು ವೆಲುಗುತ್ರ ಎಂದು ಗುರುತಿಸಲಾಗಿದೆ.

ಈ ಪ್ರಕರಣವು ಸಿಪಿಐ (ಮಾವೋವಾದಿ) ಗೆ ಯುವಕರ ನೇಮಕಾತಿ ಮತ್ತು ಅವರ ಚಟುವಟಿಕೆಗಳನ್ನು ಮತ್ತಷ್ಟು ನಡೆಸಲು ಮತ್ತು ಮಾವೋವಾದಿ ಸಿದ್ಧಾಂತಗಳನ್ನು ಹರಡಲು ಶಿಬಿರಗಳನ್ನು ನಡೆಸುವುದರ , ಸಂಘಟನೆಗಳ ತರಬೇತಿಗೆ ಸಂಬಂಧಿಸಿದೆ ಎಂದು ಎನ್ಐಎ ಹೇಳಿದೆ ಎನ್ನಲಾಗಿದೆ.

ಸಿಪಿಐ (ಮಾವೋವಾದಿ)ಯ ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್, ಕ್ರಾಂತಿಕಾರಿ ಬರಹಗಾರರ ಸಂಘದ ಸದಸ್ಯರಾದ ಪಿನಾಕಾ ಪಾಣಿ ಮತ್ತು ವರಲಕ್ಷ್ಮಿ, ವಯನಾಡಿನ ಶ್ರೀಕಾಂತ್ ಎಂದು ತನಿಖೆಯಲ್ಲಿ ಕಂಡುಬಂದಿದೆ. ಮತ್ತು ಆಂಧ್ರಪ್ರದೇಶದ ಆಂಜನೇಯ ಅವರೆಲ್ಲ ಸೇರಿ ಚೈತನ್ಯ ಅವರನ್ನು ಮಾವೋ ಸಿದ್ಧಾಮತಕ್ಕೆ ಪ್ರೇರೇಪಿಸಿ ತಮ್ಮೊಂದಿಗೆ ನೇಮಕಾತಿ ಮಾಡಿಕೊಂಡಿದ್ದರು. ನೇಮಕಾತಿಯ ನಂತರ, ಭಾರತದ ಒಕ್ಕೂಟದ ಭದ್ರತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಅವರಿಗೆ ತರಬೇತಿ ನೀಡಲಾಗಿದೆ ಎಂದು ಎನ್‌ಐಎ ಹೇಳಿದೆ ಎನ್ನಲಾಗಿದೆ.

ಪ್ರಸ್ತುತ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!