ನೋಂದಾಣಿ ಮಾಡದೆ ಹೋಮ್ ಸ್ಟೇಗಾಗಿ ವಿಲ್ಲಾ ಬಳಕೆ ಆರೋಪ: ಯುವರಾಜ್ ಸಿಂಗ್ ಗೆ ನೊಟೀಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾ ಪ್ರವಾಸೋದ್ಯಮ ಇಲಾಖೆಯಿಂದ ಭಾರತೀಯ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ಗೆ ನೊಟೀಸ್ ಜಾರಿಯಾಗಿದೆ.

ಇಲ್ಲಿನ ಮೊರ್ಜಿಮ್‌ನಲ್ಲಿರುವ ವಿಲ್ಲಾವನ್ನು ರಾಜ್ಯದ ಸಂಬಂಧಿತ ಅಧಿಕಾರಿಗಳಲ್ಲಿ ನೋಂದಾಯಿಸದೆ ಆನ್‌ಲೈನ್‌ನಲ್ಲಿ ಹೋಮ್‌ಸ್ಟೇಗಾಗಿ ಹಾಕಿದ್ದಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದೆ.

ಗೋವಾದ ವರ್ಚವಾಡ, ಮೋರ್ಜಿಮ್, ಪೆರ್ನೆಮ್‌ನಲ್ಲಿರುವ ನಿಮ್ಮ ವಸತಿ ಆವರಣವು ಹೋಮ್‌ಸ್ಟೇ ಆಗಿ ಕಾರ್ಯನಿರ್ವಹಿಸುತ್ತಿದೆ. ‘Airbnb’ ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುತ್ತಿದೆ ಎಂದು ಗಮನಕ್ಕೆ ಬಂದಿದೆ ಎಂದು ನೋಟಿಸ್ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯು ಯುವರಾಜ್ ಸಿಂಗ್ ಅವರಿಗೆ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಉಪ ನಿರ್ದೇಶಕರ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!