Tuesday, March 28, 2023

Latest Posts

SHOCKING NEWS | ಅಲ್‌ಖೈದಾ ಜತೆ ನಂಟು ಆರೋಪ: ಬೆಂಗಳೂರಿನಲ್ಲಿ ಶಂಕಿತನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನ ಥಣಿಸಂದ್ರದಲ್ಲಿ ಅಲ್‌ಖೈದಾ ಜತೆ ನಂಟು ಹೊಂದಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಥಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್‌ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಆರಿಫ್‌ನನ್ನು ಬಂಧಿಸಿದ್ದಾರೆ. ಆರಿಫ್ ತೀವ್ರ ವಿಚಾರಣೆ ನಡೆಸುತ್ತಿದ್ದು, ಸ್ಫೊಟಕ ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಕಳೆದ ಎರಡು ವರ್ಷಗಳಿಂದ ಅಲ್‌ಖೈದಾ ಜತೆ ಆರಿಫ್ ಸಂಬಂಧದಲ್ಲಿದ್ದ ಎನ್ನಲಾಗಿದೆ. ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ವರ್ಕ್ ಫ್ರಂ ಹೋಮ್ ಕೆಸಲ ಮಾಡುತ್ತಿದ್ದ. ಈತನಿಗೆ ಉಗ್ರ ಸಂಘಟನೆಗಳಿಗೆ ಸೇರುವ ಆಸಕ್ತಿ ಮೊದಲಿನಿಂದಲೂ ಇತ್ತು ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಉಗ್ರ ಸಂಘಟನೆ ಸೇರಲು ತಯಾರಿ ನಡೆಸಿದ್ದ ಎನ್ನಲಾಗಿದೆ.

ಟೆಲಿಗ್ರಾಮ್ ಹಾಗೂ ಡಾರ್ಕ್ ನಟೆಟ್ ಮೂಲಕ ಅಲ್‌ಖೈದಾ ಗ್ರೂಪ್‌ನಲ್ಲಿಯೂ ಸಕ್ರಿಯನಾಗಿದ್ದ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!