ಮತ್ತೊಂದು ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಪುತ್ರಿ ಎಂಟ್ರಿ: ಹೀರೋ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ತ್ರಿವಿಕ್ರಮ್ SSMB28 ಸಿನಿಮಾ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಮೊದಲ ಶೆಡ್ಯೂಲ್ ಶೂಟಿಂಗ್ ಈಗಾಗಲೇ ಮುಗಿದಿದ್ದು, ಇದೀಗ ಎರಡನೇ ಶೆಡ್ಯೂಲ್ ಗೆ ಚಿತ್ರತಂಡ ರೆಡಿಯಾಗಿದೆ. ಮತ್ತು ತ್ರಿವಿಕ್ರಮ್ ಈ ಸಿನಿಮಾವನ್ನು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನರ್ ಮಾಡಲು ತಯಾರಾಗುತ್ತಿದ್ದಾರೆ. ಈ ಚಿತ್ರದಲ್ಲಿ ಅದ್ಧೂರಿ ಕಾಸ್ಟಿಂಗ್ ಇರಲಿದೆ ಎನ್ನುತ್ತವೆ ಚಿತ್ರದ ಮೂಲಗಳು.

ಈಗಾಗಲೇ ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸುತ್ತಿದ್ದಾರೆ. ಈ ನಡುವೆ ಯಂಗ್ ಬ್ಯೂಟಿ ಶ್ರೀಲೀಲಾರನ್ನು ಮತ್ತೊಬ್ಬ ನಾಯಕಿಯಾಗಿ ತೆಗೆದುಕೊಳ್ಳಲು ತ್ರಿವಿಕ್ರಮ್ ಮುಂದಾಗಿದ್ದಾರೆ. ಇದಲ್ಲದೆ ಈ ಸಿನಿಮಾದಲ್ಲಿ ಹಲವು ಹಿರಿಯ ನಟರು ಕೂಡ ನಟಿಸಲಿದ್ದಾರೆ. ಆದರೆ ಇತ್ತೀಚೆಗೆ ಈ ಪಟ್ಟಿಗೆ ಮತ್ತೊಬ್ಬ ಸ್ಟಾರ್ ಕಿಡ್ ಸೇರ್ಪಡೆಯಾಗಿದ್ದಾರೆ. ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಚಿತ್ರ ವಲಯದಲ್ಲಿ ಕೇಳಿಬರುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲು ಅರ್ಹ ಎಷ್ಟು ಜನಪ್ರಿಯರಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಮತ್ತು ಸಮಂತಾ ನಾಯಕಿಯಾಗಿ ನಟಿಸುತ್ತಿರುವ ‘ಶಾಕುಂತಲಂ’ ಚಿತ್ರದಲ್ಲಿ ಅಲ್ಲು ಅರ್ಹ ಸಣ್ಣ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ತ್ರಿವಿಕ್ರಮ್ ಈ ಚಿತ್ರದಲ್ಲಿ ಅಲ್ಲು ಅರ್ಹಾಗೆ ವಿಶೇಷ ಪಾತ್ರ ಬರೆದಿದ್ದಾರೆ.ಆ ಪಾತ್ರದಲ್ಲಿ ಅರ್ಹಾ ಅವರನ್ನು ನಟಿಸಲು ಅವಕಾಶ ಕೊಡುವಂತೆ ನಿರ್ದೇಶಕ ಬನ್ನಿಗೆ ಕೇಳಿಕೊಂಡಿದ್ದರು. ತ್ರಿವಿಕ್ರಮ್ ಮನವಿಗೆ ಬನ್ನಿ ಕೂಡಲೇ ಒಪ್ಪಿಗೆ ಸೂಚಿಸಿದರು. ಮಹೇಶ್ ಬಾಬು ಅವರಂತಹ ಸ್ಟಾರ್ ಹೀರೋ ಸಿನಿಮಾದಲ್ಲಿ ತ್ರಿವಿಕ್ರಮ್ ಅಲ್ಲು ಅರ್ಹಾಗೆ ಮಹತ್ವದ ಪಾತ್ರದ ಬಗ್ಗೆ ಕುತೂಹಲ ಅಭಿಮಾನಿಗಳಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!