ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿರಿಯಾನಿ ರುಚಿಯಾಗಿಲ್ಲ ಎಂದು ಹೋಟೆಲ್‌ನಲ್ಲಿನ ಅಡುಗೆ ಭಟ್ಟರು, ವೇಟರ್ ಹಾಗೂ ಹೋಟೆಲ್ ಮಾಲೀಕನನ್ನು ಥಳಿಸಿರುವ ಘಟನೆ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಕಾಮರೆಡ್ಡಿ ಜಿಲ್ಲೆಯ ಬೀಬಿಪೇಟಾ ಮಂಡಲ ಕೇಂದ್ರದಲ್ಲಿರುವ ರೆಸ್ಟೋರೆಂಟ್‌ಗೆ ಬಂದಿದ್ದ ಐವರು ತಿನ್ನಲು ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ವೇಟರ್ ಬಿಸಿ ಬಿಸಿ ಬಿರಿಯಾನಿ ಸಪ್ಲೈ ಮಾಡಿದ್ದಾನೆ. ಬರಿಯಾನಿ ತಿಂದ ಬಳಿಕ ರುಚಿಯಾಗಿಲ್ಲ ಎಂದು ಕೋಪಗೊಂಡ ಐವರು ರೆಸ್ಟೋರೆಂಟ್ ಮಾಲೀಕ ಸಂತೋಷ್, ಅಡುಗೆ ಭಟ್ಟರು ಹಾಗೂ ವೇಟರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಇಬ್ಬರು ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದು, ರೆಸ್ಟೋರೆಂಟ್‌ನಲ್ಲಿದ್ದ ಪೀಠೋಪಕರಣಗಳು ಧ್ವಂಸಗೊಂಡಿವೆ. ದಾಳಿ ಮಾಡಿದವರು ಬೀಬಿಪೇಟ ವಲಯದ ಮಲ್ಕಾಪುರ ಗ್ರಾಮದವರು ಎಂದು ಮಾಲೀಕರು ಗುರುತಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ಸಂತೋಷ್ ನೀಡಿದ ದೂರಿನ ಮೇರೆಗೆ ಬೀಬಿಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.