CINE NEWS | ಸದ್ದಿಲ್ಲದೇ ಘೋಷಣೆಯಾಯ್ತು ಅಲ್ಲು ಅರ್ಜುನ್ ಹೊಸ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ಸದ್ದಿಲ್ಲದೆ ಹೊಸ ಸಿನಿಮಾ ಅನೌನ್ಸ್ ಆಗಿದೆ.

ಪುಷ್ಪ-2 ಕೆಲಸದಲ್ಲಿ ಅಲ್ಲು ಅರ್ಜುನ್ ಬ್ಯುಸಿ ಆಗಿದ್ದಾರೆ. ಪುಷ್ಪ-2 ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ, ಇದರ ಜೊತೆಗೆ ಅಲ್ಲು ಅರ್ಜುನ್ ನಟನೆ ಮೇಲೂ ನಿರೀಕ್ಷೆ ಹೆಚ್ಚಾಗಿದೆ.

ಈ ಬೆನ್ನಲ್ಲೇ ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದಕ್ಕೆ ತಾತ್ಕಾಲಿಕವಾಗಿ ಎಎ೨೧ ಎಂದು ಹೆಸರಿಡಲಾಗಿದೆ. ಸಿನಿ ಘಟಾನುಘಟಿಗಳನ್ನು ಒಟ್ಟಿಗೇ ಇಲ್ಲಿ ಕಾಣಬಹುದಾಗಿದೆ, ಅರ್ಜುನ್ ರೆಡ್ಡಿ ಹಾಗೂ ಕಬೀರ್ ಸಿಂಗ್‌ಗೆ ಆಕ್ಷನ್ ಕಟ್ ಹೇಳಿದ ಸಂದೀಪ್ ವಂಗ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ರಣ್‌ಬೀರ್ ಕಪೂರ್ ನಟನೆಯ ಅನಿಮಲ್‌ಗೂ ಸಂದೀಪ್ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!