ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮಧ್ಯಾಹ್ನ 12 ಗಂಟೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ 7ನೇ ಅಂತರಾಷ್ಟ್ರೀಯ ಧರ್ಮ-ಧಮ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ರಾಜ್ಯಪಾಲ ಮಂಗುಭಾಯಿ ಪಟೇಲ್ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಮತ್ತು ಸಾಂಚಿ ಬೌದ್ಧ-ಇಂಡಿಕ್ ಸ್ಟಡೀಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನೀರ್ಜಾ ಗುಪ್ತಾ ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಸಾಂಚಿ ಬೌದ್ಧ-ಇಂಡಿಕ್ ಸ್ಟಡೀಸ್ ವಿಶ್ವವಿದ್ಯಾಲಯ ಮತ್ತು ಇಂಡಿಯಾ ಫೌಂಡೇಶನ್‌ನಿಂದ ಭೋಪಾಲ್‌ನಲ್ಲಿ ಅಂತರರಾಷ್ಟ್ರೀಯ ಧರ್ಮ-ಧಮ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನವು ಹೊಸ ಯುಗದಲ್ಲಿ ಮಾನವತಾವಾದದ ತತ್ವಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮಾರ್ಚ್ 3 ರಿಂದ 5 ರವರೆಗೆ ಭೋಪಾಲ್‌ನ ಕುಶಾಭೌ ಠಾಕ್ರೆ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ.
15 ದೇಶಗಳ 350ಕ್ಕೂ ಹೆಚ್ಚು ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, ‘ಧರ್ಮ ಧಮ್ಮ’ದ ವಿಶ್ವ ದೃಷ್ಟಿಕೋನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಭೂತಾನ್, ಮಂಗೋಲಿಯಾ, ಶ್ರೀಲಂಕಾ, ಇಂಡೋನೇಷ್ಯಾ, ಥಾಯ್ಲೆಂಡ್, ವಿಯೆಟ್ನಾಂ, ನೇಪಾಳ, ದಕ್ಷಿಣ ಕೊರಿಯಾ, ಮಾರಿಷಸ್, ರಷ್ಯಾ, ಸ್ಪೇನ್, ಫ್ರಾನ್ಸ್, ಅಮೆರಿಕ ಮತ್ತು ಬ್ರಿಟನ್ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.