ಇನ್ನೇನು ಕ್ರಿಸ್ ಮಸ್ ಹತ್ತಿರವೇ ಇದೆ, ಸೀಕ್ರೆಟ್‌ ಸಾಂತಾ ಆಡೋದು ಹೇಗೆ ಗೊತ್ತಾ? ಯಾವ ಗಿಫ್ಟ್ ಕೊಡಬಹುದು ನೋಡಿ..

ಇನ್ನೇನು ಕ್ರಿಸ್‌ಮಸ್ ಬಂದೇ ಬಿಡುತ್ತದೆ. ಕ್ರಿಸ್‌ಮಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಎನ್ನುವಾಗ ಸೀಕ್ರೆಟ್ ಸಾಂತಾ ಆಟ ಆಡಲಾಗುತ್ತದೆ. ಈ ಆಟ ಆಡೋದು ಹೇಗೆ? ಏಕೆ ಇಲ್ಲಿದೆ ಮಾಹಿತಿ..

ಸಾಂತಾ ಕ್ಲೌಸ್ ನಮ್ಮ ಆಸೆಗಳನ್ನು ಪೂರೈಸುತ್ತಾನೆ. ಆದರೆ ಅದು ಯಾವ ರೂಪದಲ್ಲಿಯಾದರೂ ಆಗಬಹುದು. ಅನಿರೀಕ್ಷಿತ ಉಡುಗೊಡೆಗಳು ಎಷ್ಟೆಲ್ಲಾ ಖುಷಿ ನೀಡುತ್ತದೆ. ಅಷ್ಟೇ ಅಲ್ಲದೆ ಪ್ರೀತಿಪಾತ್ರರಿಗೆ ನಾವು ಗಿಫ್ಟ್ ನೀಡುವುದರಿಂದ ಅವರೆಷ್ಟು ಖುಷಿಯಾಗುತ್ತಾರೆ, ಖುಷಿಯನ್ನು ಪಡೆದು, ಹಂಚುವುದು ಈ ಆಟದ ಉದ್ದೇಶವಾಗಿದೆ.

35 Best Christmas Gifts for Coworkers - Coworker Gift Ideasಆಟ ಆಡೋದು ಹೇಗೆ?
ಆಫೀಸ್, ಕಾಲೇಜ್, ಪಿಜಿ ಹೀಗೆ ಎಲ್ಲಾದರೂ ಇರಿ. ನಿಮ್ಮ ಗುಂಪಿನಲ್ಲಿ 10 ಜನರು ಇರುತ್ತಾರೆ ಎಂದರೆ 10 ಜನರ ಹೆಸರಿರುವ ಚೀಟಿ ಬರೆಯಬೇಕು. ಈ ಚೀಟಿಯನ್ನು ಎಸೆದು ಒಬ್ಬೊಬ್ಬರು ಒಂದೊಂದು ಚೀಟಿಯನ್ನು ಪಡೆಯಬೇಕು. ಯಾರ ಬಳಿ ಯಾರ ಹೆಸರು ಬಂದಿರುತ್ತದೋ ಆ ವ್ಯಕ್ತಿಗೆ ದಿನವೂ ಒಂದೊಂದು ಗಿಫ್ಟ್ ನೀಡಬೇಕು. ಆ ವ್ಯಕ್ತಿ ನನ್ನ ಸಾಂತಾ ಯಾರು ಎಂದು ಗೆಸ್ ಮಾಡುತ್ತಾ ಇರಬೇಕು. ಕ್ರಿಸ್‌ಮಸ್ ದಿನ ಯಾರ ಸಾಂತಾ ಯಾರು ಎನ್ನುವುದನ್ನು ರಿವೀಲ್ ಮಾಡಲಾಗುತ್ತದೆ.

Christmas Gift Ideas: Last Minute Digital Christmas Gift Ideas for Your  Family & Friendsಏನು ಗಿಫ್ಟ್ ನೀಡಬಹುದು?
ರೋಸಸ್
ಚಾಕೋಲೆಟ್ಸ್
ಕೀ ಚೈನ್ಸ್
ಪಿಲ್ಲೋಗಳು
ಪರ್ಫ್ಯೂಮ್
ವಾಚ್
ಬಳೆ
ಮೇಕಪ್
ಪರ್ಸ್
ಟೀಶರ್ಟ್
ತಿನಿಸುಗಳು
ಕಾಫಿ ಮಗ್
ಅಲಂಕಾರಿಕ ವಸ್ತುಗಳು
ಇಯರ್‌ಫೋನ್
ಗೊಂಬೆಗಳು
ಗಿಡಗಳು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!