ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಒಂದು ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೃತಪಟ್ಟರೂ, ಉಕ್ರೇನ್ ಸರ್ಕಾರ ಮುಂದುವರಿಯಲು ಬೇಕಾದ ಯೋಜನೆಗಳು ಸಿದ್ಧವಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಆಂಟೊನಿ ಬ್ಲಿಂಕೆನ್ ಹೇಳಿದ್ದಾರೆ.
ಈಗಾಗಲೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ನಡೆಸಲು ಆರಂಭಿಸಿ 12 ದಿನಗಳಾಗಿವೆ. ಝೆಲೆನ್ಸ್ಕಿ ಅವರನ್ನು ಹತ್ಯೆ ಮಾಡಲು ರಷ್ಯಾದ ನೂರಾರು ಸೈನಿಕರು ಕೀವ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಉಕ್ರೇನ್ ಆರೋಪ ಮಾಡಿದೆ.
ಯುದ್ಧಕ್ಕೂ ಮುನ್ನ ರಷ್ಯಾದ ಬೇಹುಗಾರಿಕೆ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರುವ ಹಲವು ಸೈನಿಕರು ಉಕ್ರೇನ್‌ಗೆ ಕಾಲಿಟ್ಟಿದ್ದರು ಎಂದು ಉಕ್ರೇನ್ ಪಶ್ಚಿಮ ಭಾಗದ ರಕ್ಷಣಾ ಪಡೆಗಳು ಹೇಳಿವೆ. ಝೆಲೆನ್ಸ್ಕಿ ಅವರು ಹತ್ಯೆ ಯತ್ನದಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಝೆಲೆನ್ಸ್ಕಿ ಹತ್ಯೆ ಭೀತಿ ಬಗ್ಗೆ ಕ್ಲಿಂಟನ್ ಮಾತನಾಡಿದ್ದು. ಉಕ್ರೇನ್ ಸರ್ಕಾರ ಸಾಮಾನ್ಯದ್ದಲ್ಲ, ನಾನು ಉಕ್ರೇನ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದೇನೆ. ಸರ್ಕಾರ ಮುನ್ನೆಡಸಲು ಬೇಕಾದ ಎಲ್ಲ ಯೋಜನೆಗಳು ಸಿದ್ಧವಿದೆ ಎಂದಿದ್ದಾರೆ.